ತುಮಕೂರು:
ಮಾಜಿ ಸಚಿವ, ಬಂಡಾಯ ಕಾಂಗ್ರೆಸ್ ಶಾಸಕ ರಮೇಶ್ ಜಾರಕಿಹೊಳಿ ಅವರನ್ನು ಸಾಮಾಜಿಕ ತಾಣದಲ್ಲಿ ಅವಾಚ್ಯವಾಗಿ ನಿಂದಿಸಿದ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರ ಬೆಂಬಲಿಗನ ಮೇಲೆ ಹಲ್ಲೆ ನಡೆಸಿದ ಘಟನೆ ನಡೆದಿದೆ.ಕಾಂಗ್ರೆಸ್ ಸಾಮಾಜಿಕ ತಾಣಗಳ ಇನ್‌ಚಾರ್ಜ್ ಆಗಿದ್ದ ದರ್ಶನ್ ಮೇಲೆ ಹಲ್ಲೆ ನಡೆಸಲಾಗಿದೆ.
ದರ್ಶನ್ ಅವರು ಫೇಸ್‌ಬುಕ್‌ನಲ್ಲಿ ರಮೇಶ್ ಜಾರಕಿಹೊಳಿ ಅವರನ್ನು ವೇಶ್ಯೆಗೆ ಹೋಲಿಕೆಮಾಡಿ ಅವಾಚ್ಯ ಶಬ್ಧ ಬಳಸಿದ್ದರು. ಕಾಂಗ್ರೆಸ್ ಈ ಬಗ್ಗೆ ಕ್ಷಮೆ ಕೇಳಬೇಕು ಎಂದು ಜಾರಕಿಹೊಳಿ ಬೆಂಬಲಿಗರು ಒತ್ತಾಯಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
