ಕಾರವಾರ:
ಬಸ್ ಹಾಗೂ ಟೆಂಪೋ ನಡುವೆ ಡಿಕ್ಕಿವಡೆದು ಟೆಂಪೋದಲ್ಲಿದ್ದ 11 ಜನರು ಗಾಯಗೊಂಡಿರುವ ಘಟನೆ ಕುಮಟಾ ತಾಲೂಕಿನ ಮೊರಬ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿರಲ್ಲಿ ನಡೆದಿದೆ.
ಐವರ ಸ್ಥಿತಿ ಗಂಭೀರವಾಗಿದೆ ಬಾಗಲಕೋಟೆ ಜಿಲ್ಲೆಯ ಬಾದಾಮಿಯ ಹುಲುಕೇರಿ ಗ್ರಾಮದ ಜನರು ಉಡುಪಿ ಕಡೆ ತೆರಳುತ್ತಿದ್ದ ಟೆಂಪೋ ಹಾಗೂ ಮಂಗಳೂರಿನಿಂದ ಹುಬ್ಬಳ್ಳಿ ಕಡೆಗೆ ಹೊರಟಿದ್ದ ಬಸ್ಸಿನ ನಡುವೆ ತಡರಾತ್ರಿ ಡಿಕ್ಕಿ ಸಂಭವಿಸಿದೆ. ಟೆಂಪೋದಲ್ಲಿ 13 ಜನರಿದ್ದು, ಮಕ್ಕಳು ಸೇರಿದಂತೆ 11 ಜನರಿಗೆ ಗಾಯಗಳಾಗಿವೆ. ತಕ್ಷಣ ಗಾಯಗೊಂಡವರನ್ನು ಕುಮಟಾ ತಾಲೂಕು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗಿದೆ.
ಇನ್ನು ಗಾಯಗೊಂಡ ಐವರ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಮಣಿಪಾಲ್ ಆಸ್ಪತ್ರೆಗೆ ಸಾಗಿಸಲಾಗಿದೆ. ಎಲ್ಲರೂ ಕೆಲಸಕ್ಕೆಂದು ಉಡುಪಿಗೆ ವಲಸೆ ಹೋಗುತ್ತಿದ್ದರು ಎನ್ನಲಾಗಿದೆ. ಸ್ಥಳಕ್ಕೆ ತೆರಳಿದ್ದ ಕುಮಟಾ ಪೊಲೀಸರು ಪರಿಶೀಲನೆ ಬಳಿಕ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ