ಪಣಜಿ:
ಮಿತ್ರ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಗೋವಾ ಅಭಿವೃದ್ದಿಗೆ ಶ್ರಮಿಸುತ್ತೇನೆ ಎಂದು ಗೋವಾದ ನೂತನ ಸಿಎಂ ಪ್ರಮೋದ್ ಸಾವಂತ್ ಹೇಳಿದ್ದಾರೆ.
ಪ್ರಮೋದ್ ಸಾವಂತ್ ರನ್ನು ಮೈತ್ರಿ ಸರ್ಕಾರದ ಸಿಎಂ ಆಗಿ ಆಯ್ಕೆ ಮಾಡಿತ್ತು. ಅದರಂತೆ ನಿನ್ನೆ ತಡರಾತ್ರಿ 2 ಗಂಟೆಯಲ್ಲಿ ಪ್ರಮೋದ್ ಸಾವಂತ್ ಗೋವಾದ ನೂತನ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದರು.
ಇದೀಗ ಇಂದು ಬೆಳಗ್ಗೆ ಮೊದಲ ಬಾರಿಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಿತ್ರ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಗೋವಾದಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತೇನೆ ಮತ್ತು ರಾಜ್ಯದ ಜನತಗೆ ಸ್ಥಿರ ಸರ್ಕಾರವನ್ನು ನೀಡುವ ಜವಾಬ್ದಾರಿ ಕೂಡ ತಮ್ಮ ಮೇಲಿದೆ. ಬಾಕಿ ಉಳಿದಿರುವ ಕಾರ್ಯಗಳನ್ನು ತಮ್ಮ ಸರ್ಕಾರ ಪೂರ್ಣಗೊಳಿಸಲಿದೆ. ಬಹುಶಃ ನಾನು ಮನೋಹರ್ ಪರಿಕ್ಕರ್ ಅವರ ಮಟ್ಟಿಕ್ಕೆ ಕೆಲಸ ಮಾಡದೇ ಇರಬಹುದು. ಆದರೆ ನನ್ನ ಶಕ್ತಿ ಮೀರಿ ಗೋವಾ ಜನತೆಗಾಗಿ ದುಡಿಯುತ್ತೇನೆ ಎಂದು ಪ್ರಮೋದ್ ಸಾವಂತ್ ಹೇಳಿದ್ದಾರೆ.
Newly-appointed Goa CM Pramod Sawant: I have to provide a stability & move ahead together with all allies. It'll be my responsibility to complete the incomplete works. I will not be able to work as much as Manohar Parrikar ji but I will definitely try to work as much as possible. pic.twitter.com/BImogFkxp0
— ANI (@ANI) March 18, 2019
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
