ಕಲಬುರಗಿ:
‘ನಾನು ಜೆಡಿಎಸ್ ಬಿಡಲಿಲ್ಲ, ಅಹಿಂದ ಸಮಾವೇಶ ಮಾಡಿದ್ದಕ್ಕೆ ಎಚ್.ಡಿ.ದೇವೇಗೌಡರೇ ನನ್ನನ್ನು ಪಕ್ಷದಿಂದ ಉಚ್ಛಾಟಿಸಿದ್ದರು. ಹೀಗಾಗಿ, ನಾನು ಕಾಂಗ್ರೆಸ್ ಸೇರಬೇಕಾಯಿತು’ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿರುವುದು.
ನಾನು ಜೆಡಿಎಸ್ ಬಿಟ್ಟದ್ದು ಯಾಕೆ ಎಂದು ಬಿಜೆಪಿಯ ಮಾಜಿ ಡಿಸಿಎಂ ಆರ್ ಅಶೋಕ್ ಕೇಳುತ್ತಿದ್ದಾರೆ. ನಾನು ಜೆಡಿಎಸ್ ಬಿಟ್ಟಿರಲಿಲ್ಲ. ಅಹಿಂದ ಚಟುವಟಿಕೆಯಲ್ಲಿ ಭಾಗವಹಿಸಿದ ಹಿನ್ನೆಲೆಯಲ್ಲಿ ದೇವೇಗೌಡ ಅವರೇ ನನ್ನನ್ನು ಉಚ್ಛಾಟನೆ ಮಾಡಿದ್ದರು. ಡಾ. ಉಮೇಶ್ ಜಾದವ್ ಪಕ್ಷ ಬಿಟ್ಟಿರುವುದಕ್ಕೂ ನಾನು ಜೆಡಿಎಸ್ ಬಿಟ್ಟಿರೋದಕ್ಕೂ ವ್ಯತ್ಯಾಸವಿದೆ ಎಂದು ಕಲಬುರಗಿಯಲ್ಲಿ ಸಿದ್ದರಾಮಯ್ಯ ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ