ಕೊಲೊಂಬೋ ವಿಮಾನ ನಿಲ್ದಾಣದ ಬಳಿ 9ನೇ ಬಾಂಬ್​ ನಿಷ್ಕ್ರಿಯಗೊಳಿಸಿದ ಪೊಲೀಸರು

ಕೊಲಂಬೋ, :

     ಶ್ರೀಲಂಕಾದಲ್ಲಿ ನಡೆದ ಸರಣಿ ಆತ್ಮಾಹುತಿ ಬಾಂಬ್ ಸ್ಫೋಟದಲ್ಲಿ ಇದುವರೆಗೂ 290 ಮಂದಿ ಜೀವಬಿಟ್ಟಿದ್ದಾರೆ. ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.  ಇನ್ನು ಭಾರತದಿಂದ ಹೋದವರ 7 ಜನರಲ್ಲಿ 2 ಮೃತಪಟ್ಟಿರುವ ಬಗ್ಗೆ ಸಚಿವೆ ಸುಷ್ಮಾ ಸ್ವರಾಜ್ ಟ್ವೀಟ್ ಮಾಡಿದ್ದು, ಇನ್ನುಳಿದವರ ಬಗ್ಗೆ ಮಾಹಿತಿಯೇ ಇಲ್ಲ. ಹಾಗೆಯೇ ವಿವಿಧ ದೇಶಗಳಿಂದ ಶ್ರೀಲಂಕಾಕ್ಕೆ ಪ್ರವಾಸ ಇನ್ನಿತರೆ ಕೆಲಸದ ಮೇಲೆ ಬಂದವರದ್ದೂ ಇದೆ ಕಥೆ.

    ಜನತೆಗೆ ಭಾನುವಾರ ಕರಾಳ ದಿನವಾಗಿದೆ. ಕೊಲೊಂಬೋದ ಮೂರು ಚರ್ಚ್​ ಹಾಗೂ ಐಷಾರಾಮಿ ಹೊಟೇಲ್​ಗಳಲ್ಲಿ ನಡೆದ ಆತ್ಮಾಹುತಿ ಬಾಂಬ್​ ದಾಳಿಯಿಂದಾಗಿ 290ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಈ ದಾಳಿಗೆ ಸಂಬಂಧಿಸಿದಂತೆ ಈವರೆಗೆ 24 ಜನರನ್ನು ಶ್ರೀಲಂಕಾ ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಇದರ ಜೊತೆಗೆ ಕೊಲೊಂಬೋ ಮುಖ್ಯ ವಿಮಾನ ನಿಲ್ದಾಣದ ಬಳಿ  ಸ್ಪೋಟಿಸಲು ಇಟ್ಟಿದ್ದ 9ನೇ ಬಾಂಬ್​ರ ಅನ್ನು ರಕ್ಷಣಾ ಅಧಿಕಾರಿಗಳು ನಿಷ್ಕ್ರಿಯಗೊಳಿಸಿದ್ದಾರೆ. ವಿಮಾನ ನಿಲ್ದಾಣದ ಬಳಿ ಭಾನುವಾರ ರಾತ್ರಿ ಈ ಬಾಂಬ್​ ಪತ್ತೆಯಾಗಿದ್ದ ​ ಸುಧಾರಿತ ಪೈಪ್​ ಬಾಂಬ್​  ಅನ್ನು ವಾಯು ಸೇನಾ ಅಧಿಕಾರಿಗಳು ಪತ್ತೆ ಮಾಡಿ ನಿಷ್ಕ್ರಿಯಗೊಳಿಸಿದ್ದಾರೆ. ಇದು ನಾಡಾ ಬಾಂಬ್​ ಎಂದು ಎಎಫ್​ಪಿ ವರದಿ ಮಾಡಿದೆ.

  ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap