ಕೇರಳದಲ್ಲಿ ನಿಫಾ ವೈರಸ್​ : ಹಲವೆಡೆ ಹೈ ಅಲರ್ಟ್​

ತಿರುವನಂತರಪುರ: 

   ಕೇರಳ ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಪತ್ರಿಕಾಗೋಷ್ಠಿ ನಡೆಸಿ, ಕೇರಳದಲ್ಲಿ ನಿಫಾ ವೈರಸ್​ ಪತ್ತೆಯಾಗಿರುವ ಬಗ್ಗೆ ಮಾಹಿತಿ ನೀಡಿದ್ದರು.ಮಾರಣಾಂತಿಕ ನಿಫಾ ವೈರಸ್​ಗೆ ವಿದ್ಯಾರ್ಥಿನಿಯೊಬ್ಬಳು ತುತ್ತಾಗಿರುವುದು ದೃಢಪಟ್ಟ ಹಿನ್ನೆಲೆ ಹಲವು ಜಿಲ್ಲೆಗಳಲ್ಲಿ ಹೈ ಅಲರ್ಟ್​ ಘೋಷಿಸಲಾಗಿದೆ.

   ನಿಫಾ ಸೋಂಕು ಹರಡಿರುವ ಶಂಕೆಯಲ್ಲಿ ಅಬ್ಸರ್ವೇಶನ್​ನಲ್ಲಿ ಇಡಲಾಗಿದ್ದ 311 ಜನರಿಗೆ ಮನೆಗೆ ತೆರಳುವಂತೆ ಆರೋಗ್ಯ ಇಲಾಖೆ ಹೇಳಿದೆ. ನಾಲ್ಕು ಮಂದಿಯನ್ನು ಕಲಮಸ್ಸೆರಿ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರಲ್ಲಿ ಮೂವರು ನಿಫಾ ಸೋಂಕಿತ ವಿದ್ಯಾರ್ಥಿನಿಗೆ ಚಿಕಿತ್ಸೆ ನೀಡುತ್ತಿದ್ದವರಾಗಿದ್ದು, ಒಬ್ಬರು ಆಕೆಯ ರೂಮ್​ಮೇಟ್​ ಎಂದು ಹೇಳಲಾಗಿದೆ.

  ನಿನ್ನೆ ಈ ಮಾಹಿತಿ ದೃಢವಾಗುತ್ತಿದ್ದಂತೆ ಎರ್ನಾಕುಲಂ ಜಿಲ್ಲೆಯಲ್ಲಿ ಹೈ ಅಲರ್ಟ್​ ಘೋಷಿಸಲಾಗಿದೆ. ಅಲಪ್ಪುಝಾ, ಕೊಝಿಕೊಡೆ, ವಯನಾಡು, ಕೊಲ್ಲಾ, ತ್ರಿಸೂರ್​ ಜಿಲ್ಲೆಗಳಲ್ಲಿ ಪ್ರತ್ಯೇಕ ವಾರ್ಡ್​ಗಳನ್ನು ಸಹ ತೆರೆಯಲಾಗಿದೆ.

  ವಿದ್ಯಾರ್ಥಿನಿ ವಾಸವಿದ್ದ ಇಡುಕ್ಕಿಯಿಂದಲೇ ವೈರಸ್​ ಹರಡುತ್ತಿದೆ ಎಂಬ ಮಾತುಗಳನ್ನು ಅಲ್ಲಿನ  ಡಾ. ಎನ್​.ಪ್ರಿಯಾ ಅಲ್ಲಗಳೆದಿದ್ದಾರೆ. ವಿದ್ಯಾರ್ಥಿನಿ ವಾಸವಿದ್ದ ಮನೆಯ ಸುತ್ತಮುತ್ತ ಪರೀಕ್ಷೆ ನಡೆಸಲಾಗಿದ್ದು, ವೈರಸ್​ ಪತ್ತೆಯಾಗಿಲ್ಲ. ಆದರೂ ಜಿಲ್ಲೆಯಾದ್ಯಂತ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. 

 ಎರ್ನಾಕುಲಂನಲ್ಲಿಯೂ ಕಂಟ್ರೋಲ್​ ರೂಂ ಸಂಖ್ಯೆ 1077ಗೆ ಕರೆ ಮಾಡಿ, ನಿಫಾ ಲಕ್ಷಣಗಳು ಕಂಡುಬಂದಲ್ಲಿ ಮಾಹಿತಿ ಪಡೆಯಬಹುದಾಗಿದೆ. ಅಲ್ಲದೆ, ಅರಣ್ಯ, ವನ್ಯಜೀವಿ, ಉದ್ಯೋಗ ಇಲಾಖೆಗಳಿಗೆ ವಿಶೇಷ ಕ್ರಮಗಳನ್ನು ಅನುಸರಿಸುವಂತೆ ತಿಳಿಸಲಾಗಿದೆ. ಕಾರ್ಮಿಕರಿಗಾಗಿ ಜಾಗೃತಿ ಕಾರ್ಯಕ್ರಮಗಳನ್ನು ಕೈಗೊಳ್ಳುವಂತೆ ಕಾರ್ಮಿಕ ಇಲಾಖೆಗೆ ಸೂಚಿಸಲಾಗಿದೆ.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

Recent Articles

spot_img

Related Stories

Share via
Copy link
Powered by Social Snap