ತುಮಕೂರು:
ಮಾಜಿ ಶಾಸಕ ಕೆ.ಎನ್ ರಾಜಣ್ಣ ಅವರ ಮಧುಗಿರಿ ಕೋಟೆಗೆ ತುಮಕೂರು ಗ್ರಾಮಾಂತರ ಕ್ಷೇತ್ರದ ಜೆಡಿಎಸ್ ಶಾಸಕ ಗೌರಿಶಂಕರ್ ಎಂಟ್ರಿ ಕೊಟ್ಟಿದ್ದಾರೆ. ಕ್ಷೇತ್ರದ ದಂಡಿನ ಮಾರಮ್ಮಗೆ ಹರಕೆ ತೀರಿಸುವ ನೆಪದಲ್ಲಿ ಶಾಸಕ ಗೌರಿಶಂಕರ್ ಶಕ್ತಿ ಪ್ರದರ್ಶನ ಮಾಡಿದ್ದಾರೆ.
ಕೆ.ಎನ್.ರಾಜಣ್ಣ ಹಾಗೂ ಗೌರಿಶಂಕರ್ ನಡುವಿನ ಕಲಹ ಉಂಟಾಗಿದ್ದು ಮಾಧ್ಯಮದ ಮುಂದೆಯೇ ಇಬ್ಬರು ಮುಖಂಡರು ವಾಕ್ಸಮರ ಮುಂದುವರೆಸಿದ್ದಾರೆ. ಜೆಡಿಎಸ್ ಶಾಸಕರಿದ್ದರೂ ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿ ಲೀಡ್ ಬಂದಿದಕ್ಕೆ ಕೆ.ಎನ್ ರಾಜಣ್ಣ ಮಾತನಾಡಿದ್ದರು. ಇನ್ನು ರಾಜಣ್ಣ ಅವರ ಮಾತಿನಿಂದ ಕೋಪಗೊಂಡಿದ್ದ ಗೌರಿಶಂಕರ್ ಅವರು, ರಾಜಣ್ಣ ಈಗಾಗಲೇ ನೀವು ಸೋತಿದ್ದೀರಾ, ಮತ್ತೇ ಮತ್ತೇ ನಿಮ್ಮನ್ನು ಸೋಲಿಸುವ ತಾಕತ್ತು ನಮಗಿದೆ ಎಂದು ಅವರಿಗೆ ಟಾಂಗ್ ಕೊಟ್ಟಿದ್ದಾರೆ.
ಮಧುಗಿರಿಯಲ್ಲಿ ಕೆ.ಎನ್ ರಾಜಣ್ಣ ಅವರನ್ನು ಸೋಲಿಸಲು ಜೆಡಿಎಸ್ ಶಾಸಕ ಗೌರಿಶಂಕರ್ ಈಗಿನಿಂದಲೇ ರಣತಂತ್ರ ರೂಪಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಅಲ್ಲದೇ ಮಧುಗಿರಿಯಲ್ಲಿ ಬಿಜೆಪಿ ಲೀಡ್ ಬಂದಿರೋದು ಮೋದಿ ಅಲೆಯಿಂದ ಮಾತ್ರ ಇನ್ಯಾವ ನಾಯಕನ ಸಹಾಯದಿಂದಲ್ಲಾ ಎಂದಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ