ಲಿಫ್ಟ್​ ಕೊಡುವ ನೆಪದಲ್ಲಿ ಮಹಿಳೆ ಮೇಲೆ ಅತ್ಯಾಚಾರ

ಉತ್ತರಾಖಂಡ್: 

    ಉತ್ತರಾಖಂಡ್ ತೆಹ್ರಿ ಜಿಲ್ಲೆಯಲ್ಲಿ ಕರ್ನಾಟಕದ ಮಹಿಳೆ ಮೇಲೆ ಟ್ರಕ್ ಚಾಲಕನೋರ್ವ ಶನಿವಾರ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.  28 ವರ್ಷದ ಕರ್ನಾಟಕ ಮೂಲದ ಮಹಿಳೆ, ತನ್ನ ಕುಟುಂಬದೊಂದಿಗೆ ಜಗಳ ಮಾಡಿಕೊಂಡು ಮನೆ ಬಿಟ್ಟು ಉತ್ತರಾಖಂಡ್​ಗೆ ಬಂದಿದ್ದರು. 

   ಟ್ರಕ್​ ಚಾಲಕ ಲಿಫ್ಟ್​ ಕೊಡುವ ನೆಪದಲ್ಲಿ ಮಹಿಳೆಯನ್ನ ಲಾರಿಯಲ್ಲಿ ಕೂರಿಸಿಕೊಂಡು ಬಳಿಕ ಆಕೆ ಮೇಲೆ ಅತ್ಯಾಚಾರ ಎಸಗಿ ದಾರಿ ಮಧ್ಯದಲ್ಲೆ ಆಕೆಯನ್ನ ಲಾರಿಯಿಂದ ಎಸೆದು ಪರಾರಿಯಾಗಿದ್ದಾನೆ ಎಂದು ಮಹಿಳೆ ದೂರಿದ್ದಾಳೆ.  ವೈದ್ಯಕೀಯ ಪರೀಕ್ಷೇಗೆ ಒಳಪಡಿಸಿದಾಗ ಮಹಿಳೆ ಮೇಲೆ ಅತ್ಯಾಚಾರವಾಗಿರೋದು ದೃಢಪಟ್ಟಿದೆ.

  ಆಕೆಯ ಹೇಳಿಕೆ ಮೇಲೆ ದೂರು ದಾಖಲಿಸಿಕೊಳ್ಳಲಾಗಿದ್ದು, ಈಗಾಗಲೇ ಮಹಿಳೆಯ ಸಂಬಂಧಿಕರಿಗೆ ಮಾಹಿತಿ ನೀಡಲಾಗಿದೆ. ಆರೋಪಿ ಲಾರಿ ಚಾಲಕನಿಗಾಗಿ ಹುಡುಕಾಟ ಶುರು ಮಾಡಿದ್ದಾಗಿ ಸಬ್ ಇನ್ಸ್‌ಪೆಕ್ಟರ್ ಸುರೇಂದ್ರ ಸಿಂಗ್ ರಾವತ್ ತಿಳಿಸಿದ್ದಾರೆ.

      ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link