ಬೆಂಗಳೂರು:
ಜಲಸಂಪನ್ಮೂಲ ಖಾತೆ ಬೇಕೆಂದು ನಾನು ಮುಖ್ಯಮಂತ್ರಿಯವರ ಮುಂದೆ ಬೇಡಿಕೆ ಇಟ್ಟಿಲ್ಲ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರು ಮಂಗಳವಾರ ಸ್ಪಷ್ಟಪಡಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವ ಖಾತೆಗಳಿಗೂ ಬೇಡಿಕೆ ಇಟ್ಟಿಲ್ಲ. ಊಹಾಪೋಹದ ಪ್ರಶ್ನೆಗಳಿಗೆ ನಾನು ಉತ್ತರಿಸುವುದಿಲ್ಲ. ನಾನು ಯಾವತ್ತು ಯಾವುದೇ ಖಾತೆಯನ್ನು ಕೇಳಿಯೇ ಇಲ್ಲ. ಈಗಿರುವ ಗೃಹ ಖಾತೆಯನ್ನು ನಾನು ಕೇಳಿಲ್ಲ. ಜಲ ಸಂಪನ್ಮೂಲ ಖಾತೆ ಬೇಕು ಎಂಬುದು ಕೇವಲ ಮಾಧ್ಯಮಗಳ ಸೃಷ್ಟಿ ಎಂದು ತಿಳಿಸಿದರು.