ಅಮೆರಿಕದ ಟೆಕ್ಸಾಸ್​ನ ಶಾಪಿಂಗ್ ಕಾಂಪ್ಲೆಕ್ಸ್​ನಲ್ಲಿ ಗುಂಡಿನ ದಾಳಿ; 20 ಸಾವು, 26 ಜನರ ಸ್ಥಿತಿ ಗಂಭೀರ

ನವದೆಹಲಿ : 

   ಅಮೆರಿಕ ಟೆಕ್ಸಾಸ್​ನಲ್ಲಿ ಇಂದು ಗುಂಡಿನ ದಾಳಿ ನಡೆದಿದ್ದು, 20 ಜನರು ಸಾವನ್ನಪ್ಪಿದ್ದಾರೆ.  ದ್ವೇಷದ ಹಿನ್ನಲೆಯಲ್ಲಿ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಘಟನೆಯಲ್ಲಿ 26 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಟೆಕ್ಸಾಸ್​ನ ಶಾಪಿಂಗ್ ಏರಿಯಾದಲ್ಲಿ ಗುಂಡಿನ ದಾಳಿ ನಡೆದಿದೆ. ಈ ದಾಳಿ ನಡೆಸಿರುವ ಗನ್​ಮ್ಯಾನ್​ 21 ವರ್ಷದ  ಪ್ಯಾಟ್ರಿಕ್ ಕ್ರೂಸಿಯಸ್ ಎಂದು ಗುರುತಿಸಲಾಗಿದೆ. ಈತ ತನ್ನ ಫೇಸ್​ಬುಕ್ ಖಾತೆಯಲ್ಲಿ ಈ ಬಗ್ಗೆ ಪೋಸ್ಟ್​ ಒಂದನ್ನು ಹಾಕಿರುವುದು ಪೊಲೀಸರ ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಆ ಪೋಸ್ಟ್​ ಮಾಡಿರುವ ವ್ಯಕ್ತಿಯೇ ಕೃತ್ಯ ಎಸಗಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಹೀಗಾಗಿ, ಆ ವ್ಯಕ್ತಿಯನ್ನು ಬಂಧಿಸಲಾಗಿದೆ.

kannadd

   ವೀಕೆಂಡ್ ಆದ್ದರಿಂದ ಟೆಕ್ಸಾಸ್​ನ ವಾಲ್​ಮಾರ್ಟ್​​ನಲ್ಲಿ ಸಾಕಷ್ಟು ಜನರು ಸೇರಿದ್ದರು. ಈ ವೇಳೆ ಗುಂಡಿನ ದಾಳಿ ನಡೆಸಲಾಗಿದೆ. ಒಂದು ವಾರದಲ್ಲಿ ಇದು ಎರಡನೇ ಗುಂಡಿನ ದಾಳಿಯಾಗಿದ್ದು, ಕಳೆದ ವಾರ ಕ್ಯಾಲಿಫೋರ್ನಿಯದಲ್ಲಿ ಇದೇ ರೀತಿಯ ಸಾಮೂಹಿಕ ಗುಂಡಿನ ದಾಳಿ ನಡೆಸಲಾಗಿತ್ತು. ನಿನ್ನೆ ನಡೆದ ಘಟನೆ ವೇಳೆ ಆ ಸ್ಥಳದಲ್ಲಿ ಸುಮಾರು 3 ಸಾವಿರ ಜನರಿದ್ದರು ಎನ್ನಲಾಗಿದೆ. ಯುವಕನೊಬ್ಬ ಎಕೆ 47 ಹಿಡಿದುಕೊಂಡು ಹೋಗುತ್ತಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಪ್ರಕರಣದ ತನಿಖೆಯನ್ನು ಪೊಲೀಸರು ಚುರುಕುಗೊಳಿಸಿದ್ದಾರೆ.

 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link