ನೇತ್ರಾಣಿ ದ್ವೀಪದಲ್ಲಿ ಅಲೆಗಳ ಹೊಡೆತಕ್ಕೆ ಮುಳುಗಿದ ದೋಣಿ

ಭಟ್ಕಳ:

     ಮಂಗಳೂರು ಮೂಲದ ಬೋಟ್ ನೇತ್ರಾಣಿ ದ್ವೀಪದಲ್ಲಿ ಮುಳುಗಡೆಯಾದ ಘಟನೆ ನಡೆದಿದೆ. ಅಲೆಗಳ ರಭಸ ಹೆಚ್ಚಾಗಿ ಬೋಟ್ ಮುಳುಗಿರುವುದಾಗಿ ತಿಳಿದುಬಂದಿದ .ಈ ಬೋಟ್ ನಲ್ಲಿದ್ದ ಹತ್ತು ಮಂದಿ ಮೀನುಗಾರರನ್ನು ಮತ್ತೊಂದು ಬೋಟ್ ನಲ್ಲಿದ್ದ ಮೀನುಗಾರರು ರಕ್ಷಿಸಿದ್ದಾರೆ. ಇವರೆಲ್ಲರೂ ಆಂಧ್ರ ಮೂಲದವರು ಎನ್ನಲಾಗಿದೆ.

   ಸೈಮಾ 1 ಎಂಬ ಈ ಬೋಟ್ ಮಂಗಳೂರಿನ ಮೊಹಮದ್ ಆಸಿಫ್ ಎಂಬುವರಿಗೆ ಸೇರಿದ್ದು, ಭಾನುವಾರ ವೆಂಕಟೇಶ್ ಎಂಬುವರು ಬೋಟ್ ಚಲಾಯಿಸುತ್ತಿದ್ದರು. ವಾರದ ಹಿಂದೆ ಮಂಗಳೂರಿನಿಂದ ಈ ಬೋಟ್‌ ಮೀನುಗಾರಿಕೆಗೆ ತೆರಳಿತ್ತು. ಆದರೆ ನೇತ್ರಾಣಿಗುಡ್ಡದ ಸಮೀಪ ಸಮುದ್ರದ ಅಲೆಗಳು ಹೆಚ್ಚಾದ್ದರಿಂದ ಅಲ್ಲೇ ನಿಲುಗಡೆ ಮಾಡಲಾಗಿತ್ತು. ಆದರೆ ಇದ್ದಕ್ಕಿದ್ದಂತೆ ಬೋಟ್ ಮುಳುಗಲು ಆರಂಭಿಸಿದೆ. ಕ್ಷಣವೇ ಮತ್ತೊಂದು ಬೋಟ್ ನಲ್ಲಿದ್ದ ಸಿಬ್ಬಂದಿ ಈ ಬೋಟ್ ನಲ್ಲಿದ್ದವರನ್ನು ರಕ್ಷಿಸಿದ್ದಾರೆ.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link