ಬೆಳಗಾವಿ :
ಪಬ್-ಜಿ ಗೇಮ್ ಆಡಬೇಡ ಎಂದು ಬುದ್ಧಿವಾದ ಹೇಳಿದ್ದಕ್ಕೆ ಮಗನೇ ತನ್ನ ತಂದೆಯ ಕತ್ತರಿಸಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಬೆಳಗಾವಿ ತಾಲೂಕಿನ ಕಾಕತಿ ಗ್ರಾಮದ ಸಿದ್ದೇಶ್ವರ ನಗರದಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನು ಶಂಕ್ರಪ್ಪ ಕುಂಬಾರ (60) ಎಂದು ಗುರುತಿಸಲಾಗಿದೆ. ರಘುವೀರ್ (25) ತಂದೆಯನ್ನೇ ಹತ್ಯೆಗೈದ ಮಗ . ಪೊಲೀಸ್ ಇಲಾಖೆಯಲ್ಲಿ ಎಎಸ್ಐ ಆಗಿ ಕಾರ್ಯನಿರ್ವಹಿಸಿದ್ದ ಶಂಕ್ರಪ್ಪ ಮೂರು ತಿಂಗಳ ಹಿಂದೆ ನಿವೃತ್ತಿ ಹೊಂದಿದ್ದರು.
ಮಗ ರಘುವೀರ್ ಪಬ್-ಜಿ ಗೇಮ್ ಯಾವಾಗಳು ಆಡುತ್ತಿದ್ದ. ಹೀಗಾಗಿ ತಂದೆ ಶಂಕ್ರಪ್ಪ ರಾತ್ರಿ ಹೊತ್ತಿನಲ್ಲಿ ಹೆಚ್ಚು ಮೊಬೈಲ್ ಬಳಸದಂತೆ ಮಗನಿಗೆ ಬುದ್ಧಿವಾದ ಹೇಳುತ್ತಿದ್ದರು. ಈ ಸಂದರ್ಭದಲ್ಲಿ ಆತ ಕುಪಿತಗೊಂಡು ಅಕ್ಕಪಕ್ಕದ ಮನೆಯವರ ಕಿಟಕಿ ಗಾಜುಗಳನ್ನು ಒಡೆದುಹಾಕಿದ್ದ. ಹೀಗಾಗಿ ಆತನನ್ನು ಠಾಣೆಗೆ ಕರೆದೊಯ್ದಿದ್ದ ಕಾಕತಿ ಪೊಲೀಸರು ತಂದೆಯ ಸಮ್ಮುಖದಲ್ಲಿ ಬುದ್ಧಿವಾದ ಹೇಳಿ ಕಳುಹಿಸಿದ್ದರು. ಆದರೂ, ಆತ ಮೊಬೈಲ್ ಬಿಟ್ಟಿರಲಿಲ್ಲ. ನಿನ್ನೆ ರಾತ್ರಿಯೂ ಮೊಬೈಲ್ನಲ್ಲಿ ಪಬ್-ಜಿ ಗೇಮ್ ಆಡುತ ಮಗ್ನನಾಗಿದ್ದ. ಹೀಗಾಗಿ ತಂದೆ ಶಂಕ್ರಪ್ಪ ಮಗನನನ್ನು ಕಟುವಾಗಿ ಬೈದಿದ್ದರು.
ತಂದೆ ಬೈದಿದ್ದಕ್ಕೆ ಕೆರಳಿದ ಮಗ ರಘುವೀರ್ ತಾಯಿಯನ್ನು ಕೋಣೆಯೊಂದರಲ್ಲಿ ಕೂಡಿಹಾಕಿ ಇಳಿಗೆಮಣೆಯಿಂದ ಶಂಕ್ರಪ್ಪನವರ ಕೈಕಾಲು ಹಾಗೂ ಕುತ್ತಿಗೆ ಭಾಗವನ್ನು ಕತ್ತರಿಸಿ ಭೀಕರವಾಗಿ ಕೊಲೆಗೈದಿದ್ದಾನೆ. ಪ್ರಕರಣ ಕಾಕತಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಆರೋಪಿಯನ್ನು ಈಗಾಗಲೇ ವಶಕ್ಕೆ ಪಡೆಯಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ