‘ಎಲ್ಲಾ ಕಾಂಗ್ರೆಸ್ ಶಾಸಕರು ಒಂದು ತಿಂಗಳ ಸಂಬಳ ಕೊಡುತ್ತೇವೆ’ – ಸಿದ್ದರಾಮಯ್ಯ

ಬೆಂಗಳೂರು:

   ಸಿದ್ದರಾಮಯ್ಯ ದೆಹಲಿಗೆ ಹೋಗಿದ್ದಾರೆ, ನಮ್ಮ ಬಳಿ ಬಂದಿಲ್ಲ ಅಂತ ಸುದ್ದಿ ಇದೆ, ನಾನು ಬಾದಾಮಿಗೆ ಹೋಗ್ಬೇಕಿತ್ತು. ಆದರೆ ಕಣ್ಣಿನ ಆಪರೇಶನ್ ಆಗಿದೆ ಹೀಗಾಗಿ ಹೋಗ್ಲಿಕ್ಕೆ ಆಗ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾನುವಾರ ಹೇಳಿದರು. ನಗರದಲ್ಲಿಂದು ಮಾಧ್ಯಮದ ಜೊತೆ ಮಾತನಾಡಿದ ಅವರು, ನನ್ನ ಮಗ ಯತೀಂದ್ರ ಅವರನ್ನು ಕಳಿಸಿದ್ದೀನಿ. ಡಾಕ್ಟರ್ ಹೋಗಿ ಅಂದ ಕೂಡಲೇ ಹೋಗುತ್ತೇನೆ ಧೂಳಿನಿಂದ ದೂರ ಇರಿ ಅಂತ ವೈದ್ಯರು ಸಲಹೆ ಕೊಟ್ಟಿದ್ದಾರೆ.

   ಇನ್ನು ಬರೀ ಬಾದಾಮಿ ಅಲ್ಲ, ಎಲ್ಲಾ ಪ್ರದೇಶಗಳಿಗೂ ಭೇಟಿ ಕೊಡಬೇಕು. ಸಂತ್ರಸ್ತರಿಗೆ ಧಾರಾಳವಾಗಿ ಸ್ಪಂದಿಸಬೇಕು ಅಂತ ಸಾರ್ವಜನಿಕರಲ್ಲಿ ಮನವಿ ಮಾಡುತ್ತೇನೆ. ಪ್ರವಾಹ ಕಡಿಮೆ ಆಗಿ ಜನ ಜೀವನ ಸುಧಾರಿಸಲಿ ಅಂತ ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಅವರು ನುಡಿದರು.

   ಸದ್ಯ ನಮ್ಮ ಎಲ್ಲಾ ಕಾಂಗ್ರೆಸ್ ಶಾಸಕರು 1 ತಿಂಗಳ ಸಂಬಳ ಕೊಡುತ್ತೇವೆ, ವೈಮಾನಿಕ ಸಮೀಕ್ಷೆ ನಡೆಸಿದರೆ ಗೊತ್ತಾಗಲ್ಲ, ಜನರ ಬಳಿಯೇ ಹೋಗುತ್ತೇನೆ. ಪ್ರಧಾನಿಗಳಿಗೆ ಎಲ್ಲಾ ಪ್ರದೇಶಕ್ಕೂ ಹೋಗ್ಲಿಕ್ಕೆ ಆಗಲಿಲ್ವಾ ಪಾಪ ಅದಕ್ಕೆ ವೈಮಾನಿಕ ಸಮೀ ಕ್ಷೆ ನಡೆಸಿ ಅಂದೆ ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ