ಬೆಂಗಳೂರು : ಜಿಮ್ ಟ್ರೈನರ್ ಅರೆಸ್ಟ್ ; ಜಿಮ್​ಗೆ ಹೋಗುವವರೇ ಎಚ್ಚರ..!!

ಬೆಂಗಳೂರು :

    ಫಿಟ್‌ನೆಸ್ ಅಂದ್ರೆ ತುಂಬಾನೇ ಮುಖ್ಯಾ. ಫಿಟ್‌ನೆಸ್‌ಗಾಗಿ ಡಯಟ್ ಮಾಡೋದು,  ಜಿಮ್‌ಗೆ ಹೋಗಿ ಮೈಹುರಿಗೊಳಿಸುವುದು ಇತ್ಯಾದಿಗಳಿಗೆ ಮೊರೆ ಹೋಗ್ತಾರೆ. ಆದ್ರೆ ಇದೇ ಫಿಟ್‌ನೆಸ್ ಹುಚ್ಚುತನದಿಂದ ನಿಮ್ಮ ಜೀವನಕ್ಕೆ ಕುತ್ತು ಬರೋ ಸಾಧ್ಯತೆ ಇದೆ.  ದೇಹವನ್ನು ಫಿಟ್ ಆಗಿಟ್ಟುಕೊಳ್ಳಬೇಕೆಂಬ ಬಯಕೆ ಎಲ್ಲರಿಗೂ ಇದ್ದೇ ಇರುತ್ತದೆ. ಹೀಗಾಗಿ, ಬೆಂಗಳೂರಿನಂತಹ ಮಹಾನಗರಗಳಲ್ಲಿ ಬಹುತೇಕರು ಜಿಮ್ ಸೇರಿಕೊಳ್ಳುತ್ತಾರೆ. 

   ಬೆಂಗಳೂರಿನ ಚಾಮರಾಜಪೇಟೆಯ 4ನೇ ಮುಖ್ಯರಸ್ತೆಯಲ್ಲಿರುವ ಅಲ್ಟಿಮೇಟ್ ಫಿಟ್​ನೆಸ್​ ಜಿಮ್ ಟ್ರೈನರ್ ಸದ್ಯಕ್ಕೆ ಪೊಲೀಸರ ಅತಿಥಿಯಾಗಿದ್ದಾನೆ. ತನ್ನ ಜಿಮ್​ಗೆ ಬರುವವರಿಗೆ ದೇಹ ತೆಳ್ಳಗಾಗಲು ಮತ್ತು ದಪ್ಪಗಾಗಲು ಸ್ಟಿರಾಯ್ಡ್​ ಕೊಡುತ್ತಿದ್ದ ಟ್ರೈನರ್​ ಶಿವಕುಮಾರ್​ನನ್ನು ಪೊಲೀಸರು ಬಂಧಿಸಿದ್ದಾರೆ. ಜಿಮ್ ಗ್ರಾಹಕರಿಗೆ ಹಾನಿಕಾರಕ ಔಷಧವನ್ನು ನೀಡುತ್ತಿದ್ದ ಶಿವಕುಮಾರ್ ಕುರಿತು ಮಾಹಿತಿ ಕಲೆಹಾಕಿದ ಪೊಲೀಸರು ಆ. 21ರಂದು ಜಿಮ್ ಮೇಲೆ ದಾಳಿ ನಡೆಸಿದ್ದರು.

     ಪೊಲೀಸರು ದಾಳಿ ನಡೆಸಿದಾಗ ಜಿಮ್​ನಲ್ಲಿ ಹಲವು ಸ್ಟಿರಾಯ್ಡ್​ಗಳು ಪತ್ತೆಯಾಗಿವೆ. ಜೊತೆಗೆ ಕೆಲವು ಪ್ರೋಟೀನ್ ಬಾಟಲ್​ಗಳು ಕೂಡ ಪತ್ತೆಯಾಗಿವೆ. ಬ್ಯಾನ್​ ಆಗಿರುವ ಕೆಲವು ಸ್ಟಿರಾಯ್ಡ್​ಗಳನ್ನು ಗ್ರಾಹಕರಿಗೆ ನೀಡುತ್ತಿದ್ದ ಶಿವಕುಮಾರ್ ಆನ್​ಲೈನ್ ಮೂಲಕ ಅವುಗಳನ್ನು ತರಿಸಿಕೊಳ್ಳುತ್ತಿದ್ದ.

    ಆ ಔಷಧಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಔಷಧಗಳು ಹಾನಿಕಾರಕವಾಗಿದ್ದು, ಆರೋಗ್ಯದ ಮೇಲೆ ನಿಧಾನವಾಗಿ ಪರಿಣಾಮ ಬೀರುತ್ತವೆ.ವಸ್ಟಿರಾಯ್ಡ್​ ಬಳಕೆಯಿಂದ ಗಂಡಸರ ಪುರುಷತ್ವಕ್ಕೇ ತೊಂದರೆ ಉಂಟಾಗುತ್ತದೆ. ಈ ಸ್ಟಿರಾಯ್ಡ್​ಗಳು ರಕ್ತಕ್ಕೆ ಸೇರುವುದರಿಂದ ವೀರ್ಯಾಣುಗಳ ಮೇಲೆ ಪರಿಣಾಮ ಬೀರುತ್ತದೆ.

    ಹೀಗಾಗಿ, ಫಿಟ್​ನೆಸ್​ ಬೇಕೆಂದು ಸ್ಟಿರಾಯ್ಡ್​ ಸೇವಿಸಿದರೆ ಪುರುಷತ್ವವನ್ನೇ ಕಳೆದುಕೊಳ್ಳಬೇಕಾಗುತ್ತದೆ.  ಈಗಾಗಿ ಶಿವಕುಮಾರ್ ವಿರುದ್ಧ ಐಪಿಸಿ ಸೆಕ್ಷನ್ 406 ಮತ್ತು 420ರ ಅಡಿ ಪ್ರಕರಣ ದಾಖಲಿಸಲಾಗಿದೆ. ಈ ಬಗ್ಗೆ ಪೊಲೀಸರು ಔಷಧ ನಿಯಂತ್ರಣ ಇಲಾಖೆಗೆ ಪತ್ರ ಬರೆಯಲಿದ್ದಾರೆ. ಜಪ್ತಿಯಾದ ಔಷಧಗಳ ತಪಾಸಣೆ ನಡೆಸಲು ಪೊಲೀಸರು ಮುಂದಾಗಿದ್ದಾರೆ.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap