ಬೆಂಗಳೂರು :
ನಟ ಶಿವರಾಜ್ ಕುಮಾರ್ಗೆ ತೀವ್ರ ಭುಜದ ನೋವಿನಿಂದ ಬಳಲುತ್ತಿದ್ದರು ಲಂಡನ್ ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು. ಜುಲೈ 10 ರಂದು ಅವರಿಗೆ ಆಪರೇಷನ್ ಮಾಡಲಾಗಿತ್ತು. ಸರ್ಜರಿ ಬಳಿ ಯಾವುದೇ ತೊಂದರೆ ಇಲ್ಲ ಎಂದು ಹೇಳಿರುವ ವೈದ್ಯರು, ಕೆಲ ತಿಂಗಳು ವಿಶ್ರಾಂತಿ ಪಡೆಯಲು ತಿಳಿಸಿದ್ದಾರಂತೆ. ತುಂಬ ಕಾಳಜಿ ತೆಗೆದುಕೊಂಡು ನೋಡಿಕೊಂಡ ವೈದ್ಯ ಆಂಡ್ರ್ಯೂ ವ್ಯಾಲೇಸ್ ರಿಗೆ ಶಿವಣ್ಣ ಧನ್ಯವಾದ ತಿಳಿಸಿದ್ದಾರೆ.
ಡಾಕ್ಟರ್ ಆಂಡ್ರ್ಯೂ ವ್ಯಾಲೇಸ್ ಜೊತೆಗಿನ ಫೋಟೋವನ್ನು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಶಿವರಾಜ್ ಕುಮಾರ್ ಹಂಚಿಕೊಂಡಿದ್ದಾರೆ. ಯಾವಾಗಲೂ ನಗುತ್ತಾ ಮತ್ತು ಪಾಸಿಟಿವ್ ಆಗಿ ಡಾಕ್ಟರ್ ಇರುತ್ತಾರೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಶಿವರಾಜ್ ಕುಮಾರ್ ಆರೋಗ್ಯ ಸದ್ಯ ಸುಧಾರಿಸಿದ್ದು, ಆದಷ್ಟು ಬೇಗ ಡ್ಯಾನ್ಸ್ ಫೈಟ್ ಮಾಡಬಹುದಂತೆ. ಬೆಂಗಳೂರಿಗೆ ಬಂದು ಚಿತ್ರೀಕರಣ ಶುರು ಮಾಡುವ ಸಮಯಕ್ಕಾಗಿ ಕಾಯಲು ಆಗುತ್ತಿಲ್ಲ ಎಂದು ಶಿವಣ್ಣ ಹೇಳಿದ್ದಾರೆ.
ಬೆಂಗಳೂರಿಗೆ ಬಂದಿಳಿದ ಶಿವರಾಜ್ ಕುಮಾರ್ ರನ್ನು ಅವರ ಗೆಳೆಯ, ನಿರ್ದೇಶಕ ರಘುರಾಮ್ ಹಾಗೂ ನಿರ್ಮಾಪಕ ಶ್ರೀಕಾಂತ್ ಸ್ವಾಗತಿಸಿ, ಅವರ ಜೊತೆಗೊಂದು ಫೋಟೋ ತೆಗೆದುಕೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ