ಬಿಜೆಪಿ ಹಿರಿಯ ನಾಯಕ ಆಸ್ಪತ್ರೆಗೆ ದಾಖಲು!

ಕಾನ್ಪುರ :

   ಹಿರಿಯ ಬಿಜೆಪಿ ನಾಯಕ ಮುರಳಿ ಮನೋಹರ್‌ ಜೋಶಿ ಆರೋಗ್ಯದಲ್ಲಿ ತೀವ್ರ ಏರುಪೇರು ಉಂಟಾಗಿದ್ದು ಅವರನ್ನು ಕಾನ್ಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.  ಜೋಶಿ ಅವರ ಆರೋಗ್ಯ ಬಗ್ಗೆ  ಯಾವುದೇ ಆತಂಕ ಪಡುವ ಅಗತ್ಯ ಇಲ್ಲ ಎಂದು ವೈದ್ಯರು ಹೇಳಿದ್ದಾರೆ. ಕೆಲಸ ನಿಮಿತ್ತ ಭಾನುವಾರ ಕಾನ್ಪುರಕ್ಕೆ ತೆರಳಿದ್ದ ಜೋಶಿ ಆರೋಗ್ಯದಲ್ಲಿ ದಿಢೀರ್‌ ವ್ಯತ್ಯಯ ಉಂಟಾಗಿದೆ.

85ರ ಹರೆಯದ ಜೋಶಿ ಈ ಹಿಂದೆ ಬಿಜೆಪಿ ಅಧ್ಯಕ್ಷ ಹಾಗೂ ವಾಜಪೇಯಿ ಸಂಪುಟದಲ್ಲಿ ಸಚಿವರಾಗಿಯೂ ಕಾರ್ಯ ನಿರ್ವಹಿಸಿದ್ದರು. ಕಳೆದ ಅವಧಿಯಲ್ಲಿ ಸಂಸದರಾಗಿದ್ದರು.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap