ಶ್ವೇತ ಧ್ವಜದೊಂದಿಗೆ ಬಂದು ಶವಗಳನ್ನು ತೆಗೆದುಕೊಂಡು ಹೋಗಲು ಪಾಕ್ ಗೆ ಭಾರತ ಸೂಚನೆ

ನವದೆಹಲಿ:

   ಪಾಕಿಸ್ತಾನದ ಗಡಿಭಾಗದಲ್ಲಿ ಭಾರತದೊಳಗೆ ಒಳನುಸುಳಲು ಪ್ರಯತ್ನಿಸಿದ್ದ ಪಾಕಿಸ್ತಾನೀ ಸೇನೆಯ ಬಿಎಟಿ ತಂಡದ ಸದಸ್ಯರನ್ನು ಭಾರತ ಸೇನೆ ಮೊನ್ನೆ ಕೊಂದು ಹಾಕಿತ್ತು. ಕುಪ್ವಾರ ಜಿಲ್ಲೆಯ ಕೇರನ್ ಸೆಕ್ಟರ್​ನಲ್ಲಿ 5-7 ಮಂದಿ ಹತರಾಗಿದ್ದರು. ಈಗ ಈ ಮೃತದೇಹಗಳನ್ನು ತಮ್ಮ ದೇಶಕ್ಕೆ ವಾಪಸ್ ತೆಗೆದುಕೊಂಡು ಹೋಗಲು ಪಾಕಿಸ್ತಾನಕ್ಕೆ ಭಾರತ ಅವಕಾಶ ಇತ್ತಿದೆ. ಬಿಳಿ ಧ್ವಜ ಹಿಡಿದು ಬಂದು ಮೃತ ದೇಹಗಳನ್ನ ತೆಗೆದುಕೊಂಡು ಹೋಗಬೇಕೆಂದು ಭಾರತವು ಸೂಚಿಸಿದೆ. ಆದರೆ, ಪಾಕಿಸ್ತಾನದ ಕಡೆಯಿಂದ ಇನ್ನೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

  ಜುಲೈ 31 ಮತ್ತು ಆಗಸ್ಟ್ 1 ರ ಮಧ್ಯರಾತ್ರಿಯಲ್ಲಿ ಜಮ್ಮು ಮತ್ತು ಕಾಶ್ಮೀರದ ಕೇರನ್ ಸೆಕ್ಟರ್‌ನಲ್ಲಿ ಭಾರತೀಯ ಸೇನೆಯು ಒಳನುಸುಳುವಿಕೆ ಪ್ರಯತ್ನವನ್ನು ವಿಫಲಗೊಳಿಸಿತು.  ಈ ವೇಳೆ ಪಾಕಿಸ್ತಾನದ ಸಿಬ್ಬಂದಿಗೆ ಭಾರಿ ಪ್ರಮಾಣದ ಸಾವು ನೋವುಗಳನ್ನು ಸಂಭವಿಸಿದೆ ಎನ್ನಲಾಗಿದೆ. ಮೂಲಗಳ ಪ್ರಕಾರ ಭಾರತದ ಈ ಪ್ರತೀಕಾರದ ಗುಂಡಿನ ದಾಳಿಯಲ್ಲಿ ಪಾಕಿಸ್ತಾನದ ವಿಶೇಷ ಸೇವೆಗಳ ಗುಂಪಿನ ನಾಲ್ಕು ಕಮಾಂಡೋ ಸಾವನ್ನಪ್ಪಿದ್ದಾರೆ. ಹತ್ಯೆಗೀಡಾದವರಲ್ಲಿ ನಿಯಂತ್ರಣ ರೇಖೆಯಲ್ಲಿ (ಎಲ್‌ಒಸಿ) ಸಕ್ರಿಯವಾಗಿದ್ದ ಭಯೋತ್ಪಾದಕರು ಕೂಡ ಸೇರಬಹುದು ಎಂದು ಮೂಲಗಳು ತಿಳಿಸಿವೆ.

ಸುಮಾರು 5-7 ಪಾಕಿಸ್ತಾನಿ ಸೇನಾ ನಿಯಂತ್ರಕರು ಅಥವಾ ಭಯೋತ್ಪಾದಕರನ್ನು ನಿರ್ಮೂಲನೆ ಮಾಡಲಾಗಿದೆ ಮತ್ತು ಅವರ ಶವಗಳನ್ನು ನಿಯಂತ್ರಣ ರೇಖೆಯಲ್ಲಿ ಇಡಲಾಗಿದೆ.ನಿಯಂತ್ರಣ ರೇಖೆಯ ಉದ್ದಕ್ಕೂ ಎಲ್ಲಾ ದುಷ್ಕೃತ್ಯಗಳಿಗೆ ಭದ್ರತಾ ಪಡೆಗಳು ಪ್ರತಿಕ್ರಿಯಿಸುವುದನ್ನು ಮುಂದುವರಿಸುತ್ತವೆ” ಎಂದು ಉತ್ತರ ಕಮಾಂಡ್ ಹೇಳಿಕೆಯಲ್ಲಿ ತಿಳಿಸಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap