ರಾಷ್ಟ್ರಪತಿ ಭವನದ ಓರ್ವ ಸಿಬ್ಬಂದಿಗೆ ಕೊರೋನಾ ಸೋಂಕು ; 125 ಕುಟುಂಬಗಳ ಕ್ವಾರಂಟೈನ್

ನವದೆಹಲಿ :

      ಮಾರಕ ಕೊರೋನಾ ವೈರಸ್​ನಿಂದಾಗಿ ಇಡೀ ಜಗತ್ತು ಸ್ತಬ್ದಗೊಂಡಿದೆ. ಭಾರತದಲ್ಲೂ ಸೋಂಕಿತರ ಹಾಗೂ ಸಾವಿನ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಲಾಕ್​ಡೌನ್​ ನಡುವೆಯೂ ಸೋಂಕಿತರ ಸಂಖ್ಯೆ ನಿಯಂತ್ರಣಕ್ಕೆ ಬಂದಿಲ್ಲ. ಇದೀಗ ದೇಶದ ರಾಷ್ಟ್ರಪತಿ ಭವನದಲ್ಲೂ ಭೀತಿ ಎದುರಾಗಿದ್ದು, ಇಲ್ಲಿ ಕೆಲಸ ಮಾಡುವ ಓರ್ವ ಸಿಬ್ಬಂದಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿರುವುದರಿಂದ 125 ಕುಟುಂಬಗಳನ್ನು ಹೋಮ್​ ಕ್ವಾರಂಟೈನ್​ನಲ್ಲಿರಲು ಸೂಚಿಸಲಾಗಿದೆ.

    ರಾಷ್ಟ್ರಪತಿ ಭವನದಲ್ಲಿ ಒಂದು ಕೊರೋನಾ ಸೋಂಕಿತ ಪ್ರಕರಣ ವರದಿಯಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ 125 ಕುಟುಂಬಗಳನ್ನು ಹೋಂ ಕ್ವಾರಂಟೈನ್​ನಲ್ಲಿಡಲಾಗಿದೆ. ರಾಷ್ಟ್ರಪತಿ ಭವನದ ಸ್ವಚ್ಛತಾ ಕೆಲಸ ಮಾಡುತ್ತಿದ್ದ ಸಿಬ್ಬಂದಿಗೆ ಕೊರೋನಾ ಸೋಂಕು ತಗುಲಿದೆ. ಹೀಗಾಗಿ, ಕೇಂದ್ರ ಗೃಹ ಸಚಿವಾಲಯದ ಮಾರ್ಗಸೂಚಿಯಂತೆ ಮುನ್ನೆಚ್ಚರಿಕಾ ಕ್ರಮವಾಗಿ ಆ ಸಿಬ್ಬಂದಿಯ ಜೊತೆ ಸಂಪರ್ಕ ಹೊಂದಿದ್ದ 125 ಕುಟುಂಬಗಳಿಗೆ ಹೋಂ ಕ್ವಾರಂಟೈನ್​ ವಿಧಿಸಲಾಗಿದೆ.

     ಸೋಂಕಿತ ಸಿಬ್ಬಂದಿಯ ಹತ್ತಿರದ ಸಂಬಂಧಿಕರಿಗೆ ಕಳೆದ ವಾರ ಕೊರೋನಾ ಸೋಂಕು ಪತ್ತೆಯಾಗಿತ್ತು ಎನ್ನಲಾಗಿದೆ. ಅವರಿಂದಲೇ ರಾಷ್ಟ್ರಪತಿ ಭವನದ ಸ್ವಚ್ಛತಾ ಸಿಬ್ಬಂದಿಗೂ ಕೊರೋನಾ ಹರಡಿರುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಆ ವ್ಯಕ್ತಿಯೊಂದಿಗೆ ಸಂಪರ್ಕದಲ್ಲಿದ್ದ ರಾಷ್ಟ್ರಪತಿ ಭವನದ ಸಿಬ್ಬಂದಿಗಳ ಕುಟುಂಬ ಮತ್ತು ಅವರ ಮನೆಯ ಅಕ್ಕಪಕ್ಕದ ಕುಟುಂಬ ಸೇರಿದಂತೆ ಒಟ್ಟು 125 ಕುಟುಂಬಗಳನ್ನು ಹೋಂ ಕ್ವಾರಂಟೈನ್​ನಲ್ಲಿರಲು ಸೂಚಿಸಲಾಗಿದೆ. ಈ ಕುರಿತು ರಾಷ್ಟ್ರಪತಿ ಭವನ ಇನ್ನೂ ಅಧಿಕೃತ ಪ್ರಕಟಣೆ ಹೊರಡಿಸಿಲ್ಲ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap