ಆಟೋ ರಿಕ್ಷಾಗೆ ಆಯಿಲ್​ ಟ್ಯಾಂಕರ್ ಡಿಕ್ಕಿ​;10 ಮಂದಿ ದಾರುಣ ಸಾವು

ಹರಿಯಾಣ: 

   ಹರಿಯಾಣದಲ್ಲಿ ಆಟೋ ರಿಕ್ಷಾಗೆ ಆಯಿಲ್​ ಟ್ಯಾಂಕರ್ ಡಿಕ್ಕಿ ಒಡೆದು ಸ್ಥಳದಲ್ಲೇ 10 ಮಂದಿ ದಾರುಣ ಸಾವು. ಮಂಗಳವಾರ ರಾತ್ರಿ 10.30ರಲ್ಲಿ ರಾಮರಾಯ್​ ಗ್ರಾಮದ ಬಳಿ ಈ ಘಟನೆ ಸಂಭವಿಸಿದೆ. ಅಪಘಾತದಲ್ಲಿ  10 ಮಂದಿ ಸಾವಿಗಿಡಾಗಿದ್ದು  ಓರ್ವ ವ್ಯಕ್ತಿ ಗಾಯಗೊಂಡಿದ್ದಾನೆ ಎಂದು ತಿಳಿದುಬಂದಿದೆ. ಮೃತರೆಲ್ಲರೂ ಸೇನಾ ಭರ್ತಿ ರ್ಯಾಲಿ ಮುಗಿಸಿ ಮನೆಗೆ ತೆರಳುತ್ತಿದ್ದರು. ಕೂಡಲೇ ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಪ್ರಾಣ  ಉಳಿಸಲು ಆಗಿಲ್ಲ ಎಂದು ತಿಳಿಸಿದ್ದಾರೆ.

  ಜಿಂದ್ ನಗರದಿಂದ ಆಟೋ ತೆಗೆದುಕೊಂಡು ಜಿಂದ್-ಹನ್ಸಿ ರಸ್ತೆಯಲ್ಲಿ ಎಂಟು ಕಿಲೋಮೀಟರ್ ಪ್ರಯಾಣಿಸಿದ ನಂತರ ದುರಂತ ಸಂಭವಿಸಿದೆ. ಮೃತರಲ್ಲಿ ಮೂವರನ್ನು ಮಾತ್ರ ಗುರುತಿಸಲಾಗಿದ್ದು, ಉಳಿದವರ ಗುರುತು ಪತ್ತೆಗಾಗಿ ಪೊಲೀಸರು ಯತ್ನಿಸುತ್ತಿದ್ದಾರೆ.  ಸಾವನ್ನಪ್ಪಿದ ಐವರು ಒಂದೇ ಗ್ರಾಮದವರು ಎನ್ನಲಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap