ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಮನೆ ಮೇಲೆ ಎಸಿಬಿ‌ ದಾಳಿ

ಮಂಗಳೂರು ಹಾಗು ಬೆಳಗಾವಿ:

 ಆದಾಯಕ್ಕಿಂತ ಅಧಿಕ ಗಳಿಕೆಯ ಆರೋಪದ ಮೇರೆಗೆ ಮಂಗಳೂರು ಹಾಗೂ ಬೆಳಗಾವಿಯ ಅಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ಏಕಕಾಲದಲ್ಲಿ ಎಸಿಬಿ‌ ದಾಳಿ ನಡೆಸಲಾಗಿದೆ.

ಮಂಗಳೂರಿನ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಸಹಾಯಕ ಅಭಿಯಂತರರಾಗಿ 18 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಮಹಾದೇವಪ್ಪ ಅವರ, ಬೆಂಗಳೂರಿನ ಸಿದ್ದೇನಹಳ್ಳಿಯಲ್ಲಿರುವ ಮನೆ , ಕದ್ರಿ ಮಲ್ಲಿಕಟ್ಟೆಯಲ್ಲಿರುವ ಕಚೇರಿ, ಕದ್ರಿ ಕಂಬಳದಲ್ಲಿರುವ ಬಾಡಿಗೆ ಮನೆ ಹಾಗೂ ಚಿತ್ರದುರ್ಗದಲ್ಲಿರುವ ಸಂಬಂಧಿಕರ ಮನೆಗೆ  ಬಂದು ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು, ಶೋಧ ಕಾರ್ಯ ನಡೆಸುತ್ತಿದ್ದಾರೆ. ಎಸಿಬಿ ವಿಭಾಗದ ಡಿಎಸ್ಪಿ‌ ಮಂಜುನಾಥ ಬಿ. ನೇತೃತ್ವದಲ್ಲಿ ಪೊಲೀಸ್ ಇನ್​ಸ್ಪೆಕ್ಟರ್​ಗಳಾದ ಮೋಹನ್ ಕೊಟ್ಟಾರಿ, ಹಾಲಪ್ಪ, ಜಯರಾಮೇಗೌಡ ದಾಳಿ ನಡೆಸಿದ್ದಾರೆ.

ಹಾಗೆ ಕುಂದಾನಗರಿ ಬೆಳಗಾವಿಯಲ್ಲಿ ಎಸಿಬಿ ಅಧಿಕಾರಿಗಳು  ಬೆಳಗ್ಗೆಯೇ ಭಾಗ್ಯನಗರದ ಕೃಷಿ ಕಾಲೋನಿಯಲ್ಲಿರುವ ಉತ್ತರ ಕನ್ನಡದ ಜೋಯಿಡಾ ಉಪವಿಭಾಗ ಎಇಇ ಉದಯ ಛಬ್ಬಿ ಅವರ ಸೇರಿದ ಮನೆ ಹಾಗೂ ಕಚೇರಿ ಮೇಲೆ ದಾಳಿ ನಡೆಸಿದ್ದಾರೆ. ಅಲ್ಲದೇ ಉದಯ ಛಬ್ಬಿ ಸಹೊದರನ ಮನೆ ಮೇಲೆ ಕೂಡ ದಾಳಿ ನಡೆಸಲಾಗಿದೆ. ದಾಳಿ ವೇಳೆ  ದಾಖಲೆಗಳನ್ನು ಪಡೆದು ಪರಿಶೀಲನೆ ನಡೆಸಲಾಗುತ್ತಿದೆ.

         ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

Recent Articles

spot_img

Related Stories

Share via
Copy link
Powered by Social Snap