ಕುಣಿಗಲ್ :
ರಾಷ್ಟ್ರೀಯ ವೈದ್ಯರ ದಿನಾಚರಣೆಯ ಅಂಗವಾಗಿ ಕುಣಿಗಲ್ ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ವೈದ್ಯರಿಗೆ ಮತ್ತು ಸಿಬ್ಬಂದಿಗಳಿಗೆ ಪ್ರಜಾಪ್ರಗತಿ ಪತ್ರಿಕೆಯ ವಿಶೇಷ ಸಂಚಿಕೆ ಹಾಗೂ ಸಹಿಯನ್ನು ವಿತರಿಸಿ ಶುಭಕೋರಲಾಯಿತು.
ವೈದ್ಯಾಧಿಕಾರಿ ಡಾ. ಗಣೇಶ್ಬಾಬು ಅವರ ತಂಡ ಉತ್ತಮ ಸೇವೆ ಮಾಡುವ ಮೂಲಕ ಸಾರ್ವಜನಿಕ ವಲಯದಲ್ಲಿ ಹಾಗೂ ವಿವಿಧ ಸಂಘಟನೆಗಳಿಂದ ಪ್ರಶಂಸೆಗೆ ಇಲ್ಲಿನ ಸರ್ಕಾರಿ ಆಸ್ಪತ್ರೆ ಪಾತ್ರವಾಗಿದೆ. ಆ ಹಿನ್ನೆಲೆಯಲ್ಲಿ ಪ್ರಜಾಪ್ರಗತಿ ಪತ್ರಿಕೆಯ ವರದಿಗಾರ ಎಂ.ಡಿ. ಮೋಹನ್ ಮತ್ತು ಸಮಾಜ ಸೇವಕಿ ನಂದಿನಿ ಸುರೇಶ್ ಡಾ.ಗಣೇಶ್ ಬಾಬು ಅವರಿಗೆ ಪುಷ್ಪಾಹಾರ ಹಾಕಿ ಶುಭಕೋರಿದರು. ಇದೇ ಸಂದರ್ಭದಲ್ಲಿ ಮಕ್ಕಳ ತಜ್ಞೆ ಡಾ. ಸುಮಾ ಮತ್ತು ನರ್ಸ್ಗಳಿಗೆ ಹಾಗೂ ಡಿ.ಗ್ರೂಪ್ ಸಿಬ್ಬಂದಿಗಳಿಗೆ ಗುಲಾಬಿ ಹೂ ನೀಡಿ ಸಿಹಿ ವಿತರಿಸಿ ಶುಭಕೋರಿ ಅವರ ಸೇವೆಯನ್ನ ಪ್ರಶಂಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ವೈದ್ಯರು, ಸರ್ಕಾರಿ ವೈದ್ಯರಾಗಿ ಮಾಡುತ್ತಿರುವ ಸೇವೆಯನ್ನು ವೈದ್ಯರ ದಿನಾಚರಣೆಯಂದೇ ಪ್ರಜಾಪ್ರಗತಿ ಪತ್ರಿಕೆ ವಿಶೇಷ ಸಂಚಿಕೆ ಬಿಡುಗಡೆ ಮಾಡಿರುವುದು ಶ್ಲಾಘನೀಯ. ಈ ಸಂಚಿಕೆಯಲ್ಲಿ ಹಲವು ರೀತಿಯ ಉತ್ತಮ ಆರೋಗ್ಯದ ಬಗ್ಗೆ ಲೇಖನಗಳು ಮೂಡಿಬಂದಿದ್ದು ಸಾರ್ವಜನಿಕರಿಗೆ ತುಂಬಾ ತಿಳುವಳಿಕೆ ಬರುವುದರ ಜೊತೆಗೆ ಅವರು ತಮ್ಮ ಜೀವನ ಶೈಲಿಯನ್ನ ಬದಲಾಯಿಸಿಕೊಂಡು ಉತ್ತಮ ಆರೋಗ್ಯ ಪಡೆಯುವಲ್ಲಿ ಈ ಸಂಚಿಕೆ ಮಾರ್ಗದರ್ಶಿಯಾಗಿದೆ ಎಂದರು. ಸಿಬ್ಬಂದಿಗಳಾದ ಪುನಿತ್, ಚಂದ್ರಣ್ಣ, ಶಿವರಾಂ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ