ಬೆಂಕಿ ಅವಘಡ: ಓರ್ವ ಸಾವು, ಐವರಿಗೆ ಗಂಭೀರ ಗಾಯ

ಮುಂಬೈ: 

  ಮುಂಬೈನ ಕಟ್ಟಡವೊಂದರಲ್ಲಿ ಆಕಸ್ಮಿಕ ಬೆಂಕಿ  ಅವಘಡವಾದ ಕಾರಣ ಓರ್ವ ಸಾವನ್ನಪ್ಪಿ, ಅಗ್ನಿಶಾಮಕ ಸಿಬ್ಬಂದಿ ಸೇರಿದಂತೆ ಐವರು ಗಾಯಗೊಂಡಿದ್ದಾರೆ.  ಪದ್ಮಸಿ ರಸ್ತೆಯಲ್ಲಿರುವ ಆದಿತ್ಯಾ ಆರ್ಕೆಡ್ ಕಟ್ಟಡದಲ್ಲಿ ಮುಂಜಾನೆ 6 ಗಂಟೆಗೆ ಬೆಂಕಿ ಕಾಣಿಸಿಕೊಂಡಿದ್ದು, 9 ಗಂಟೆಯ ಹೊತ್ತಿಗೆ ನಾಲ್ಕನೇ ಅಂತಸ್ತಿಗೂ ವ್ಯಾಪಿಸಿದೆ. ಪರಿಣಾಮವಾಗಿ ಕಟ್ಟದಲ್ಲಿರುವ ಜನರಿಗೆ ಉಸಿರಾಟ ತೊಂದರೆ ಕಾಣಿಸಿಕೊಂಡಿದೆ.

   ಬೆಂಕಿ ನಂದಿಸಲು ಬಂದ ಅಗ್ನಿಶಾಮಕ ಸಿಬ್ಬಂದಿಗಳು ಕೂಡ  ಉಸಿರಾಟದ ಸಮಸ್ಯೆಗೆ ತುತ್ತಾಗಿದ್ದಾರೆ. ಈ ವೇಳೆ ಓರ್ವ ಸಾವನ್ನಪ್ಪಿದ್ದರೆ, ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ , ಬೆಂಕಿ ಅವಘಡಕ್ಕೆ ನಿಖರವಾದ ಕಾರಣ ತಿಳಿದು ಬಂದಿಲ್ಲ.

  ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ  

Recent Articles

spot_img

Related Stories

Share via
Copy link