ಮೈಸೂರು :
ಕೆಫೆ ಕಾಫಿ ಡೇ ಮಾಲೀಕ ವಿ. ಜಿ. ಸಿದ್ದಾರ್ಥ ಕುಟುಂಬಕ್ಕೆ ಮತ್ತೊಂದು ಅಘಾತ ಎದುರಾಗಿದೆ. ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ವಿ. ಜಿ. ಸಿದ್ದಾರ್ಥ ತಂದೆ ಗಂಗಯ್ಯ ಹೆಗ್ಡೆ ವಿಧಿಶರಾಗಿದ್ದಾರೆ.
ಭಾನುವಾರ ಬೆಳಗ್ಗೆ ಗಂಗಯ್ಯ ಹೆಗ್ಡೆ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು, ಹಲವು ದಿನಗಳಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮಾಜಿ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಅಳಿಯ ವಿ.ಜಿ. ಸಿದ್ಧಾರ್ಥ ಜುಲೈ 29ರಂದು ಸಾವನ್ನಪ್ಪಿದ್ದರು. ವಿ.ಜಿ. ಸಿದ್ಧಾರ್ಥ ಸಾವನ್ನಪ್ಪುವ ಮೊದಲೇ ಗಂಗಯ್ಯ ಹೆಗ್ಡೆ ಕೋಮಾಕ್ಕೆ ಜಾರಿದ್ದರು. ಆದ್ದರಿಂದ, ಕೊನೆಯ ತನಕ ಪುತ್ರನ ಸಾವಿನ ವಿಚಾರ ಅವರಿಗೆ ತಿಳಿಯಲೇ ಇಲ್ಲ.
ಕೆಫೆ ಕಾಫಿ ಡೇ ಮಾಲೀಕ ವಿ.ಜಿ. ಸಿದ್ಧಾರ್ಥ ತಂದೆ ಗಂಗಯ್ಯ ಹೆಗ್ಡೆ ಮೂಲತಃ ಕೃಷಿಕರು. ಮಗನ ಉದ್ಯಮಕ್ಕೆ ಬೆಂಬಲವಾಗಿ ನಿಂತವರು ಗಂಗಯ್ಯ ಹೆಗ್ಡೆ ಪುತ್ರ ವಿ.ಜಿ. ಸಿದ್ಧಾರ್ಥ ಸಾವನ್ನಪ್ಪಿದ ಸಂಗತಿ ಕೊನೆಗೂ ಅವರಿಗೆ ತಿಳಿಯಲಿಲ್ಲ ಎಂಬುದೇ ದುಃಖದ ವಿಚಾರವಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
