ಮೈಸೂರು:
ಐಎಂಎ ವಂಚನೆ ಪ್ರಕರಣವನ್ನು ಸಿಬಿಐಗೆ ವಹಿಸುವುದಿಲ್ಲ. ನಮ್ಮ ಪೊಲೀಸರೇ ಪ್ರಕರಣವನ್ನು ಯಶಸ್ವಿಯಾಗಿ ನಿಭಾಯಿಸಿಲಿದ್ದಾರೆ ಎಂದು ಗೃಹ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಐಎಂಎ ಬಹುಕೋಟಿ ಹಗರಣವನ್ನು ಬಿಜೆಪಿ ಸಿಬಿಐಗೆ ವಹಿಸಿ ಅಂತ ರಾಜಕೀಯ ಮಾಡುತ್ತಿದೆ. ಎಂ.ಎಂ.ಕಲಬುರ್ಗಿ, ಗೌರಿ ಲಂಕೇಶ್, ದಾಬೋಲ್ಕರ್ ಪ್ರಕರಣವನ್ನು ಸಿಬಿಐಗೆ ವಹಿಸಲಾಗಿತ್ತು. ಆದರೆ ಯಾರು ಪ್ರಕರಣ ಬೇಧಿಸಿದರು ಎಂದು ಪ್ರಶ್ನಿಸಿದ್ರು. ನಮ್ಮ ಪೊಲೀಸರ ಮೇಲೆ ವಿಶ್ವಾಸವಿದೆ. ಅವರೇ ಪ್ರಕರಣ ಬೇಧಿಸುತ್ತಾರೆ ಎಂದರು. ಐಎಂಎ ಪ್ರಕರಣದಲ್ಲಿ ಯಾರೇ ಭಾಗಿಯಾಗಿರಲಿ ಯಾರನ್ನು ರಕ್ಷಣೆ ಮಾಡುವುದಿಲ್ಲ. ಬಡವರ ದುಡ್ಡು ವಾಪಸ್ ಕೊಡಿಸುತ್ತೇವೆ. ಸಂಸದೆ ಶೋಭಾ ಕರಂದ್ಲಾಜೆ ಅವರು ರಾಜ್ಯ ಸರ್ಕಾರದ ಬಗ್ಗೆ ಮಾತನಾಡುವ ಮುನ್ನ ಯೋಚಿಸಿ ಮಾತನಾಡಲಿ ಎಂದರು.
ಶೋಭಾ ಕರಂದ್ಲಾಜೆ ಅವರ ಯೋಗ್ಯತೆ ಹಾಗೂ ನನ್ನ ಯೋಗ್ಯತೆ ರಾಜ್ಯದ ಜನರಿಗೆ ಗೊತ್ತಿದೆ. ಓರ್ವ ಹೆಣ್ಣುಮಗಳು ಅಂತ ಗೌರವದಿಂದ ಮಾತನಾಡುತ್ತಿದ್ದೀನಿ. ಗೌರವ ಕೊಟ್ಟು ತೆಗೆದುಕೊಳ್ಳುವುದು ಅವರು ಕಲಿಯಬೇಕಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆಗೆ ಗುಡುಗಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ