ಶಾಸಕ ತನ್ವೀರ್​ ಸೇಠ್​​​ ಮೇಲೆ ಮಾರಣಾಂತಿಕ ಹಲ್ಲೆ

ಮೈಸೂರು: 

   ಕಾಂಗ್ರೆಸ್​​ನ ಮಾಜಿ ಸಚಿವ ತನ್ವೀರ್​​ ಸೇಠ್ ಅವರ ಮೇಲೆ ಭಾನುವಾರ ರಾತ್ರಿ ಯುವಕನೋರ್ವ ಕುತ್ತಿಗೆ ಭಾಗಕ್ಕೆ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ.

   ತನ್ವೀರ್​ ಸೇಠ್​​ ಅವರು ನಗರದ ಬನ್ನಿಮಂಟಪದ ಬಾಲಭವನದ ಆವರಣದಲ್ಲಿ ನಡೆಯುತ್ತಿದ್ದ ಮದುವೆ ಹೋಗಿದ್ದರು . ವಧು- ವರರಿಗೆ ಶುಭಾಶಯ ಕೋರಿ  ಭೋಜನ ಸೇವಿಸಿ ಗಾಯನ ಕಾರ್ಯಕ್ರಮವನ್ನು ವೀಕ್ಷಿಸುತ್ತಿದ್ದರು. ಈ ವೇಳೆ ಯುವಕನೋರ್ವ ಹಲ್ಲೆ ಮಾಡಿದ್ದಾನೆ.

   ಆರ್ಕೆಸ್ಟ್ರಾ ನಡೆಯುತ್ತಿದ ವೇದಿಕೆಯ ಮುಂಭಾಗದಲ್ಲಿ ಶಾಸಕರು ಇತರರೊಂದಿಗೆ ಕುಳಿತು ಗಾಯಕರು ಹಾಡುಗಳನ್ನು ಕೇಳುತ್ತಿದ್ದರು. ಇದೇ ವೇಳೆ ಯುವಕನೋರ್ವ ಮಾರಕಾಸ್ತ್ರದಿಂದ ವೇದಿಕೆಯ ಮುಂಭಾಗದಲ್ಲಿ ಕುಳಿತಿದ್ದ ಶಾಸಕರತ್ತ  ಬಂದು ದಾಳಿ ಮಾಡಿ ಓಡು ಹೋಡಿಹೋಗಿದ್ದಾನೆ .

ಸಂಗೀತ ಕಾರ್ಯಕ್ರಮದಲ್ಲಿ ಗಾಯಕರು ಹಾಡುತ್ತಿದ್ದ ಹಾಡನ್ನು ಮೊಬೈಲ್​ನಲ್ಲಿ ವಿಡಿಯೋ ಮಾಡಿಕೊಳ್ಳುತ್ತಿದ್ದಾಗ ಹಲ್ಲೆ ನಡೆಸಿರುವುದು ಸೆರೆಯಾಗಿದೆ. ಈಗ ಈ ವಿಡಿಯೋ  ವೈರಲ್​​ ಆಗಿದೆ. ರಾತ್ರಿ 12 ಗಂಟೆಯ ಸುಮಾರಿಗೆ ಈ ಘಟನೆ ನಡೆದಿದೆ.

  ತನ್ವೀರ್ ಸೇಠ್​ ಮೇಲೆ ಹಲ್ಲೆ ನಡೆದ ಹಿನ್ನೆಲೆ ಟ್ವೀಟ್ ಮೂಲಕ ಈ ಮನವಿ ಮಾಡಿರುವ ಕಾಂಗ್ರೆಸ್ ಪಕ್ಷ, ಮಾಜಿ ಸಚಿವ ತನ್ವೀರ್ ಸೇಠ್ ಅವರ ಮೇಲೆ ಮಾರಣಾಂತಿಕ ಹಲ್ಲೆ ಆಘಾತಕಾರಿ ವಿಷಯ. ಆಸ್ಪತ್ರೆಗೆ ದಾಖಲಾಗಿರುವ ತನ್ವೀರ್ ಸೇಠ್ ಅವರು ಶೀಘ್ರ ಗುಣಮುಖರಾಗಲಿ. ತನ್ವೀರ್ ಸೇಠ್ ಅವರಿಗೆ ಭದ್ರತೆಯನ್ನು ಸರ್ಕಾರ ಒದಗಿಸಲಿ ಎಂದು ಒತ್ತಾಯಿಸಿದೆ.

  ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap