ಅಮೆರಿಕದ ‘ಕೋಟ್ಯಧಿಪತಿ’ ಗೇಮ್​ನಲ್ಲಿ 68 ಲಕ್ಷ ರೂ.​ ಗೆದ್ದ ಭಾರತೀಯ

ನ್ಯೂಯಾರ್ಕ್: 

    ಅಮೆರಿಕದ ಪ್ರತಿಷ್ಟಿತ ಜೆಪರ್ಡಿ ಕ್ವಿಜ್​ ಕಾಂಪಿಟೇಷನ್​ನಲ್ಲಿ ಭಾರತೀಯ ಮೂಲಕ ಅವಿ ಗುಪ್ತ ಎಂಬ ಯುವಕ 1 ಲಕ್ಷ ಡಾಲರ್ ಬಹುಮಾನ ಗೆದ್ದಿದ್ದಾರೆ.

2019 ಟೀನ್​ ಜೆಪರ್ಡಿ’ ಕಾಂಪಿಟೇಷನ್​ನಲ್ಲಿ ಭಾಗವಹಿಸಿದ್ದ ಅವಿ ಭಾರತೀಯ ಮೂಲದ ಮೂವರು ಯುವಕರನ್ನ ಹಿಂದಿಕ್ಕಿ 68,94,949 ರೂಪಾಯಿ ಬಹುಮಾನ ತನ್ನದಾಗಿಸಿಕೊಂಡಿದ್ದಾರೆ. ಇದೇ ವೇಳೆ ಮಾತನಾಡಿದ ಅವರು, ನಿಜಕ್ಕೂ ನನ್ನಿಂದ ನಂಬಲು ಸಾಧ್ಯವಾಗುತ್ತಿಲ್ಲ. ಜೆಪರ್ಡಿ ನನ್ನ ಮತ್ತು ನನ್ನ ಕುಟುಂಬಕ್ಕೆ ತುಂಬಾ ಸ್ಪೆಷಲ್. ನನ್ನ ಅಜ್ಜಿಗೆ ಈ ಕಾಂಪಿಟೇಷನ್​ ಅಂದ್ರೆ ತುಂಬಾ ಇಷ್ಟ ಎಂದಿದ್ದಾರೆ.

ಅವಿ ತಾಯಿ ನಂದಿತಾ ಗುಪ್ತ  ಇದಕ್ಕಾಗಿ ನನ್ನ ಮಗ ತುಂಬಾ ಶ್ರಮವಹಿಸಿದ್ದಾನೆ. ಉತ್ತಮ ಅನುಭವ ಪಡೆಯಲಿ ಎಂದು ಕಾಂಪಿಟೇಷನ್​ಗೆ ಕಳುಹಿದ್ದೆವು, ಅಂತಿಮವಾಗಿ ಅವಿ ಗೆಲುವು ಖುಷಿ ಕೊಟ್ಟಿದೆ ಎಂದು ಹೇಳಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap