ಬಿಸಿಲ ತಾಪಕ್ಕೆ ತತ್ತರಿಸಿದ ಬಿಹಾರ: ಸತ್ತವರ ಸಂಖ್ಯೆ73ಕ್ಕೆ ಏರಿದೆ

ಪಾಟ್ನಾ: 

  ಬಿಹಾರದಲ್ಲಿ ಅತಿಯಾದ ಬಿಸಿಲಿನ ತಾಪದಿಂದಾಗಿ ಒಂದೇ ದಿನದಲ್ಲಿ 40ಕ್ಕೂ ಅಧಿಕ ಜನರು ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ. ಬಿಹಾರದ ಮುಜಾಫರ್​ನಗರದ ಜನರು ಈಗಾಗಲೇ ಮೆದುಳು ಜ್ವರ ಎಂಬ ಮಾರಣಾಂತಿಕ ರೋಗವನ್ನು ಎದುರಿಸುತ್ತಿದ್ದಾರೆ. ಮೆದುಳು ಜ್ವರದಿಂದಾಗಿ ಸತ್ತವರ ಸಂಖ್ಯೆ 73 ಕ್ಕೆ ಏರಿದ್ದು.

   ಔರಂಗಾಬಾದ್ ಜಿಲ್ಲೆಯೊಂದರಲ್ಲೇ ಕಳೆದ ಎರಡು ದಿನಗಳಲ್ಲಿ 27 ಜನರು ಅಸುನೀಗಿದ್ದಾರೆ. ಗಯಾ ನಗರದಲ್ಲಿ 13 ಜನರು ಮೃತಪಟ್ಟಿದ್ದಾರೆ. ನಾವ್ಡಾ ಜಿಲ್ಲೆಯಲ್ಲಿ 12 ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ.

ಪಾಟ್ನಾ ನಗರದಲ್ಲಿ ಸಾಮಾನ್ಯ ಉಷ್ಣಾಂಶಕ್ಕಿಂತ 9.2 ಡಿಗ್ರಿ ಸೆಲ್ಸಿಯಸ್ ತಾಪಮಾನ​ ಅಧಿಕವಾಗಿದೆ. ಗಯಾ ಜಿಲ್ಲೆಯಲ್ಲಿ 45.2 ಡಿಗ್ರಿ ಸೆಲ್ಸಿಯಸ್​, ಭಾಗಲ್​ಪುರದಲ್ಲಿ 41.5 ಡಿಗ್ರಿ ಸೆಲ್ಸಿಯಸ್, ಪುರ್ನೆಯಾದಲ್ಲಿ 35.9 ಡಿಗ್ರಿ ಉಷ್ಣಾಂಶ ದಾಖಲಾಗಿದೆ. ಗರಿಷ್ಠ ತಾಪಮಾನ ಇರುವ ಕಾರಣ ಜೂನ್​ 19 ರವರೆಗೆ ಶಾಲೆಗಳನ್ನು ತೆರೆಯುವುದಿಲ್ಲ ಎಂದು ಬಿಹಾರ ಸರ್ಕಾರ ತಿಳಿಸಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap