ಮಧ್ಯಪ್ರದೇಶ :
ದುಬೈನಿಂದ ಅಮ್ಮನ ಅಂತ್ಯಕ್ರಿಯೆಗೆಂದು ಊರಿಗೆ ಬಂದಿದ್ದ ಸುರೇಶ್ ಎಂಬಾತ ಮಾ. 20ರಂದು ತನ್ನ ಕಾಲೋನಿ ಮತ್ತು ಸಂಬಂಧಿಕರು ಸೇರಿ 1,500 ಜನರಿಗೆ ತಿಥಿಯ ಊಟ ಹಾಕಿಸಿದ್ದ. ಮಾ. 25ರಂದು ಸುರೇಶ್ಗೆ ಕೊರೋನಾ ಲಕ್ಷಣಗಳು ಕಾಣಿಸಿಕೊಂಡಿದ್ದರಿಂದ ವೈದ್ಯಕೀಯ ತಪಾಸಣೆಗೆ ಒಳಗಾಗಿದ್ದರು. ಕೊರೋನಾ ಸೋಂಕು ಹರಡಿರುವುದು ದೃಢಪಟ್ಟಿದ್ದರಿಂದ ಆತನನ್ನು ಮತ್ತು ಆತನ ಹೆಂಡತಿಯನ್ನು ಕ್ವಾರಂಟೈನ್ನಲ್ಲಿ ಇರಿಸಲಾಗಿತ್ತು. ನಂತರ ಆತನ ಹತ್ತಿರದ 23 ಸಂಬಂಧಿಕರನ್ನು ವೈದ್ಯರು ತಪಾಸಣೆ ನಡೆಸಿದಾಗ ಅವರಲ್ಲಿ 10 ಜನರಿಗೆ ಕೊರೋನಾ ಇರುವುದು ಖಚಿತವಾಗಿದೆ.
ತಿಥಿಗೆ ಬಂದು ಊಟ ಮಾಡಿ ಹೋಗಿದ್ದ ಇಡೀ ಕಾಲೋನಿಯನ್ನೇ ಸೀಲ್ ಮಾಡಲಾಗಿತ್ತು. ದುಬೈನಿಂದ ಬಂದಿದ್ದ ಆ ವ್ಯಕ್ತಿಯ ಜೊತೆಗೆ ಆತನ ಕುಟುಂಬದ 12 ಜನರಿಗೂ ಕೊರೋನಾ ಸೋಂಕು ದೃಢಪಟ್ಟಿದೆ. ಈ ಮೂಲಕ 1,500 ಜನರಿಗೂ ಕೊರೋನಾ ಸೋಂಕಿನ ಭೀತಿ ತಟ್ಟಿದೆ ಮಧ್ಯಪ್ರದೇಶದ ಮೊರೇನಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ತಿಥಿಯಲ್ಲಿ ಪಾಲ್ಗೊಂಡಿದ್ದವರೆಲ್ಲರ ಮಾಹಿತಿಯನ್ನೂ ಕಲೆಹಾಕಲಾಗುತ್ತಿದ್ದು, ಅವರ ಮೇಲೆ ನಿಗಾ ಇರಿಸಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ