ಬಕ್ರೀದ್ ವಿಶೇಷ: ಸಲ್ಮಾನ್ ಖಾನ್ ಹೆಸರಿನ ಮೇಕೆಗೆ 8 ಲಕ್ಷ ಬೇಡಿಕೆ.. !!

ಲಖನೌ: 

   ಈ ಬಾರಿ ಸಲ್ಮಾನ್ ಖಾನ್’ ಹೆಸರಿನ ಮೇಕೆಯೊಂದಕ್ಕೆ ಭಾರಿ ಬೇಡಿಕೆ ಬಂದಿದೆ. ಉತ್ತರಪ್ರದೇಶದ  ಗೋರಖ್ ಪುರದಲ್ಲಿರುವ ಮೇಕೆಯೊಂದರ ಬೆಲೆ ಸುಮಾರು 8 ಲಕ್ಷ ರು ಎಂದು ಅದನ್ನು ಸಾಕಿದವರು ನಿಗದಿ ಮಾಡಿದ್ದಾರೆ. ಸುಮಾರು 95 ರಿಂದ 100 ಕೆಜಿ ತೂಗುವ ಈ ಮೇಕೆ ಬೆಲೆ ಇನ್ನಷ್ಟು ಏರಿಕೆಯಾಗಿ.

    ಈ ಮೇಕೆ ಮೇಲಿರುವ ಕಪ್ಪು ಬಣ್ಣದ ಮಚ್ಚೆಗಳು ಕಾರಣವಾಗಿದೆ” ಎಂದು ಮೇಕೆ ಮಾಲೀಕರು ಎಎನ್ಐ ಜೊತೆ ಮಾತನಾಡುತ್ತಾ ಹೇಳಿದರು. “ಸಲ್ಮಾನ್ ಮೇಕೆ ಮೇಲಿರುವ ಮಚ್ಚೆಗಳನ್ನು ಕೂಡಿಸಿ ಓದಿದರೆ ಅರೇಬಿಕ್ ಭಾಷೆಯಲ್ಲಿ ‘ಅಲ್ಲಾಹ್’ ಎಂದಾಗುತ್ತದೆ.

 ಇಂಥ ಮೇಕೆಯನ್ನು ಇರಿಸಿಕೊಂಡವರಿಗೆ ಅದೃಷ್ಟ ಒಲಿಯುತ್ತದೆ ಎಂಬ ನಂಬಿಕೆಯಿದೆ, ಇದನ್ನು ನಮ್ಮ ಮನೆಯ ಸದಸ್ಯನಾಗಿ, ನಮ್ಮ ಸೋದರನಂತೆ ಸಾಕಿದ್ದೇವೆ. ನಮ್ಮಂತೆ ಹಾಸಿಗೆ, ದಿಂಬು ಮೇಲೆ ಮಲಗುತ್ತದೆ, ನಮ್ಮಂತೆ ಎಲ್ಲವನ್ನು ತಿನ್ನುತ್ತಾನೆ, ಬೇರೆ ಮೇಕೆಗಳಂತೆ ಹುಲ್ಲು, ಎಲೆಗಳನ್ನು ತಿನ್ನಲು ಕೊಟ್ಟಿಲ್ಲ. ಚಿಪ್ಸ್, ಟಾಫಿ, ಒಣ ಹಣ್ಣುಗಳನ್ನು ನೀಡಿ ಬೆಳೆಸಿದ್ದೇವೆ, ಪ್ರತಿ ದಿನ ಸುಮಾರು 800 ರಿಂದ 1000 ರು ಖರ್ಚು ಮಾಡಿದ್ದೇವೆ” ಎಂದು ಮೇಕೆ ಮಾಲೀಕರು ಹೇಳಿದರು.

  ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

 

 

Recent Articles

spot_img

Related Stories

Share via
Copy link