ಶಿವಮೊಗ್ಗ :
ಟಿಕ್‌ಟಾಕ್ ನಲ್ಲಿ ನಕಲಿ ಖಾತೆ ತೆರೆದು ಮಹಿಳೆ ವೀಡಿಯೋವನ್ನು ಅಶ್ಲೀಲವಾಗಿ ಎಡಿಟಿಂಗ್ ಮಾಡಿ ಹಾಕಿದ್ದ ಆರೋಪಿಯನ್ನು ಸೈಬರ್ ಅಪರಾಧ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ವ್ಯಕ್ತಿಯನ್ನು ಭದ್ರಾವತಿ ಮಲ್ಲಿಗೇನಹಳ್ಳಿ ಓಲಾ ಕ್ಯಾಬ್ ಡ್ರೈವರ್ ಜೆ. ಸಂಜಯ್‌ಕುಮಾರ್ ಎಂದು ಗುರುತಿಸಲಾಗಿದೆ ಈತ october 2ರಂದು ಹಾಕಿದ್ದ ಮಹಿಳೆಯ ಅಶ್ಲೀಲ ವೀಡಿಯೋ ವೈರಲ್ ಆಗಿತ್ತು.
ಈ ಸಂಬಂಧ ಇಲ್ಲಿನ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿ ಪತ್ತೆಗಾಗಿ ಸಿಇಎನ್ ಪೊಲೀಸ್ ಠಾಣೆಯ ಕೆ.ಟಿ ಗುರುರಾಜ್ ನೇತೃತ್ವದಲ್ಲಿ ಪೊಲೀಸ್ ತಂಡ ರಚಿಸಲಾಗಿತ್ತು.ತಂಡವು ಟಿಕ್‌ಟಾಕ್ ಸಂಸ್ಥೆಯೊಡನೆ ಸಂಪರ್ಕ ಮಾಡಿ, ಈ ನಕಲಿ ಖಾತೆ ವಿವರ ಪಡೆದು ಬಳಿಕ ತನಿಖೆ ಆರೋಪಿಯನ್ನು ಪತ್ತೆ ಮಾಡಿ ಬಂಧಿಸಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
