ವಾಯುಪಡೆಯ ತರಬೇತಿ ನಿರತ ವಿಮಾನ ಪತನ : ಟ್ರೈನಿ ಪೈಲೆಟ್ ಗಳ ಸಾವು

ಹೈದರಾಬಾದ್ :

   ವಾಯುಪಡೆಯ ತರಬೇತಿನಿರತ ವಿಮಾನವೊಂದು ಪತನಗೊಂಡು ಇಬ್ಬರು ಟ್ರೈನಿ ಪೈಲೆಟ್ ಗಳು ಮೃತಪಟ್ಟ ಘಟನೆ ತೆಲಂಗಾಣದ ವಿಕರಾಬಾದ್ ಜಿಲ್ಲೆಯ ಸುಲ್ತಾನ್ ಪುರ ಗ್ರಾಮದಲ್ಲಿ ನಡೆದಿದೆ.

   ಹೈದರಾಬಾದಿನ ರಾಜೀವ್ ಗಾಂಧಿ ವಾಯುಯಾನ ಅಕಾಡಮಿಯ ವಿದ್ಯಾರ್ಥಿಗಳಾದ ಪ್ರಕಾಶ್ ವಿಶಾಲ್ ಹಾಗೂ ಅಮನ್ ಪ್ರೀತ್ ಕೌರ್ ಮೃತ ಪೈಲೆಟ್ ಗಳು. ಇವರು ಇಂದು ಬೆಳಿಗ್ಗೆ ಬೇಗಂ ಪೇಟೆ ವಿಮಾನ ನಿಲ್ದಾಣದಲ್ಲಿ ತರಬೇತಿ ಪಡೆಯುತ್ತಿದ್ದು,ಒಂದು ಗಂಟೆಯ ಅವಧಿಯ ನಂತರ ಘಟನೆ ಸಂಭವಿಸಿದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ