ಬೈಕ್​ಗಳು ಪರಸ್ಪರ ಡಿಕ್ಕಿ : ಓರ್ವ ಸ್ಥಳದಲ್ಲೇ ಸಾವು!!

ರಾಯಚೂರು:
    ರಾಯಚೂರಿನ ಕಡ್ಗಂದೊಡ್ಡಿ ಗ್ರಾಮದ ಕ್ರಾಸ್ ಬಳಿ ಹೊಸ ವರ್ಷದ ಸಂಭ್ರಮಾಚರಣೆಗಾಗಿ ಕೇಕ್​​ ತರಲು ಹೋಗುತ್ತಿದ್ದ ಸಂದರ್ಭದಲ್ಲಿ ವೇಗವಾಗಿ ಬರುತ್ತಿದ್ದ ಎರಡು ದ್ವಿಚಕ್ರ ವಾಹನಗಳು ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ಓರ್ವ ಸ್ಥಳದಲ್ಲೇ ಮೃತಪಟ್ಟಿದ್ದು, ಇನ್ನು ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.
 
    ಶ್ರೀಕಾಂತ್(24) ಮೃತಪಟ್ಟ ವ್ಯಕ್ತಿ ಎಂದು ಗುರುತಿಸಲಾಗಿದೆ. ರಾಯಚೂರಿನಿಂದ ಕಡ್ಗಂದೊಡ್ಡಿ ಗ್ರಾಮಕ್ಕೆ ಹೊರಟ ಹೀರೋಹೊಂಡ ಬೈಕ್ ಹಾಗೂ ಬೂರ್ದಿಪಾಡದಿಂದ ರಾಯಚೂರಿಗೆ ಬರುತ್ತಿದ್ದ ಹೋಂಡಾ ಶೈನ್ ಬೈಕ್​ಗಳು ಪರಸ್ಪರ ಗುದ್ದಿಕೊಂಡಿವೆ. ಈ ವೇಳೆ ಸವಾರರು ವೇಗವಾಗಿ ಚಾಲನೆ ಮಾಡಿಕೊಂಡು ಬರುತ್ತಿದ್ದರು ಎಂದು ತಿಳಿದುಬಂದಿದೆ.
    
    ಹೀ ರೋಹೊಂಡ ಬೈಕ್​​ ಸವಾರರು ಹೊಸ ವರ್ಷಚರಣೆಗೆ ಕೇಕ್, ಬ್ಯಾನರ್ ತೆಗೆದುಕೊಂಡು ಹೋಗುವಾಗ ಈ ಘಟನೆ ಸಂಭವಿಸಿದೆ ಎನ್ನಲಾಗುತ್ತಿದೆ.  ಮೃತ ವ್ಯಕ್ತಿಯ ಶವವನ್ನು ಶವಗಾರದಲ್ಲಿ ಇರಿಸಲಾಗಿದೆ. ಇನ್ನುಳಿದ ನಾಲ್ವರನ್ನು ರಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ರಾಯಚೂರು ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
            ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ