ಸುರಕ್ಷತಾ ಕ್ರಮ ಇಲ್ಲದ ಕಟ್ಟಡ : ಮಹಿಳೆ ಸಾವು

ತಿಪಟೂರು;

   ನೂತನವಾಗಿ ನಿರ್ಮಾಣವಾಗುತ್ತಿದ್ದ ಕಟ್ಟಡದ ಕಾಮಗಾರಿಯ ಸಂದರ್ಭದಲ್ಲಿ ಕಟ್ಟಡ ಕಾರ್ಮಿಕರೊಬ್ಬರು ಕೆಳಗೆ ಬಿದ್ದು ದುರ್ಮರಣವನ್ನಪ್ಪಿದ ಘಟನೆ ನಡೆದಿದೆ.

   ನಗರದ ಎಸ್.ಆರ್.ವಿ. ಕಾಲೇಜಿನ ಮುಂಭಾಗ, ಗುಬ್ಬಿ ಲೇ ಔಟ್ ಮುಂಭಾಗದ ನಿವೇಶನವೊಂದರಲ್ಲಿ ನಿರ್ಮಾಣ ಹಂತದಲ್ಲಿದ್ದ ಕಟ್ಟಡದ ನಿರ್ಮಾಣ ಕಾಮಗಾರಿಯೂ ನಡೆಯುತ್ತಿತ್ತು. ಆದರೆ ಕಟ್ಟಡ ನಿರ್ಮಾಣ ಸಂದರ್ಭದಲ್ಲಿ ಯಾವುದೇ ರೀತಿಯ ಸುರಕ್ಷತಾ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿದ್ದ ಹಿನ್ನೆಲೆಯಲ್ಲಿ   ಆದಿಲಕ್ಷ್ಮೀ ನಗರದ ರುಕ್ಕಮ್ಮ (56) ಕಟ್ಟಡ ಮಹಿಳಾ ಕಾರ್ಮಿಕರೋರ್ವರು ಆಯತಪ್ಪಿ ಕೆಳಗೆ ಬಿದ್ದು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ನಡೆದಿದೆ. ಸ್ಥಳಕ್ಕೆ ನಗರಠಾಣೆಯ ಪೊಲೀಸರು ಆಗಮಿಸಿದ್ದು, ಸ್ಥಳ ಪರಿಶೀಲನೆ ಮಾಡಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

      ನಗರದಲ್ಲಿ ಅನುಮತಿ ಇಲ್ಲದೆ ಅನಧಿಕೃತ ಕಟ್ಟಡಗಳನ್ನು ಕಟ್ಟುತ್ತಿದ್ದು ಇದರ ಬಗ್ಗೆ ನಗರಸಭೆಯ ಅಧಿಕಾರಿಗಳು ಯಾವುದೇ ಕ್ರಮತೆಗೆದುಕೊಳ್ಳುತ್ತಿಲ್ಲ. ಇನ್ನು ನಗರಸಭೆಯ ಅಧಿಕಾರಿ ಎ.ಇ.ಇ ನಾಗೇಶ್ ಹೇಳುವಂತೆ ಬಿ.ಹೆಚ್.ರಸ್ತೆಯಲ್ಲಿ ಕಟ್ಟಡಗಳನ್ನು ಕಟ್ಟಲು ೨+೧ ಗೆ ಮಾತ್ರ ಅನುಮತಿ ಇದೆ. ಆದರೆ ಒಂದೊಂದು ವಿಭಾಗಕ್ಕೆ ಒಂದೊಂದು ರೀತಿಯಲ್ಲಿ ಬದಲಾವಣೆಯಾಗುತ್ತದೆ ಎನ್ನುತ್ತಾರೆ.

    ನಗರದ ಬಿ.ಹೆಚ್.ರಸ್ತೆಯಲ್ಲೆ ಪ್ರಭಾವಿ ವ್ಯಕ್ತಿಗಳು ಬಹುಮಹಡಿ ಕಟ್ಟಡಗಳನ್ನು ಎಲ್ಲರ ಕಣ್ಣಿಗೂ ರಾಚುವಂತಿದ್ದರು ನಗರಸಭೆಯ ಅಧಿಕಾರಿಗಳು ಸುಮ್ಮನಿದ್ದಾರೆ. ಇದರ ಬಗ್ಗೆ ಪತ್ರಿಕಾವರಧಿಗಳು ಬಂದರು ಏಕೆ ನಗರಸಭೆಯವರಿಗೆ ಕಾಣುತ್ತಿಲ್ಲವೆಂಬುದು ಸಾರ್ವಜನಿಕರ ಪ್ರಶ್ನೆಗೆ ಉತ್ತರ ಸಿಗದಂತಾಗಿದೆ. ಇದರ ಬಗ್ಗೆ ಸ್ಥಳೀಯರನ್ನು ವಿಚಾರಿಸಿದಾಗ ಕಟ್ಟಡವು ಪಶುವೈದ್ಯಾಧಿಕಾರಿ ಪಂಚಾಕ್ಷರಿಯವರದ್ದಾಗಿದ್ದು ಇವರು ಕಟ್ಟಡ ನಿರ್ಮಿಸಲು ಮುತ್ತು ಎನ್ನುವವರಿಗೆ ಗುತ್ತಿಗೆ ನೀಡಿದ್ದಾರೆ ಎಂದು ತಿಳಿಸಿದರು.

  ಕೋಟ್: ಬಿ.ಹೆಚ್.ರಸ್ತೆಯಲ್ಲಿ ಕಟ್ಟಡಗಳನ್ನು ಕಟ್ಟಲು ೨+೧ ಗೆ ಮಾತ್ರ ಅನುಮತಿ ಇದೆ. ಆದರೆ ಒಂದೊಂದು ವಿಭಾಗಕ್ಕೆ ಒಂದೊಂದು ರೀತಿಯಲ್ಲಿ ಬದಲಾವಣೆಯಾಗುತ್ತದೆ.

      ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link