ತುಮಕೂರು:
ಹೇಮಾವತಿಯ ಎಸ್ಕೇಪ್ ಗೇಟನ್ನು ತೆಗೆಸಿ ನೀರನ್ನ ಹರಿಸಿಕೊಳ್ಳುವುದರ ಮೂಲಕ ತುರುವೇಕೆರೆ ಜೆಡಿಎಸ್‍ನ ಮಾಜಿ ಶಾಸಕ ಎಮ್.ಟಿ ಕೃಷ್ಣಪ್ಪ ಗೂಂಡಾವರ್ತನೆ ತೋರಿದ್ದಾರೆ.
ಶುಕ್ರವಾರ ನಡೆದ ಹೇಮಾವತಿ ನೀರು ನಿರ್ವಹಣಾ ಸಭೆಯಲ್ಲಿ ವೇಳಾಪಟ್ಟಿ ಪ್ರಕಾರ ತಾಲೂಕುಗಳಿಗೆ ನೀರು ಬಿಡಲು ನಿರ್ಧಾರ ಮಾಡಲಾಗಿತ್ತು. ಈ ಸಭೆಯ ನಿರ್ಧಾರಕ್ಕೆ ಕ್ಯಾರೇ ಎನ್ನದ ಕೃಷ್ಣಪ್ಪ ಅವರು ಕುಣಿಗಲ್‍ಗೆ ನೀರು ಹರಿಯುವ ಮಾರ್ಗ ಮಧ್ಯದ ಡಿ.ಎಸ್.ಪಾಳ್ಯದಲ್ಲಿ ಗೇಟ್ ತೆರೆದು ನೀರು ಹರಿಸಿ ದುಂಡಾವರ್ತನೆ ಮೆರೆದಿದ್ದಾರೆ.
ತಮ್ಮ ಬೆಂಬಲಿಗರ ಸಹಾಯದಿಂದ ಒಂದು ಅಡಿ ಮೇಲಕ್ಕೆ ಎಸ್ಕೇಪ್ ಗೇಟ್ ಎತ್ತಿಸಿ, ನೀರು ಹರಿಸಿದ್ದಾರೆ. ಆಗ ಸ್ಥಳಕ್ಕೆ ಆಗಮಿಸಿದ ಜಲಾಶಯದ ಎಇಇ ವಿಜಯಲಕ್ಷ್ಮೀ ಅವರು ನಿಯಮ ಉಲ್ಲಂಘನೆ ಮಾಡಬೇಡಿ ಎಂದು ಮನವಿ ಮಾಡಿದರೂ ಲೆಕ್ಕಿಸದೆ, ಅಧಿಕಾರಿಯನ್ನು ನಿಂದಿಸಿ ಹೇಮಾವತಿ ನೀರು ಹರಿಸಿಕೊಂಡಿದ್ದಾರೆ.
ಅಲ್ಲದೆ ಇದನ್ನು ಪ್ರಶ್ನಿಸಿದ ಪೊಲೀಸರ ಜೊತೆಯೂ ವಾಗ್ದಾಳಿ ನಡೆಸಿದ್ದಾರೆ . ಹೇಮಾವತಿ ನೀರು ನಿರ್ವಹಣಾ ಪ್ರಾಧಿಕಾರದ ಅನುಮತಿ ಪಡೆಯದೇ ನೀರನ್ನು ಹರಿಸುವಂತಿಲ್ಲ. ಆದರೆ ಇದನೆಲ್ಲ ಲೆಕ್ಕಿಸದೆ, ಹೇಮಾವತಿ ನೀರು ಹರಿಸಿಕೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ