ತುರುವೇಕೆರೆ :
ಸೇವಾನಿರತ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರನ್ನು ೧ ರಿಂದ ೫ನೇ ತರಗತಿಗಳಿಗೆ ಮಾತ್ರ ಬೋಧಿಸುವಂತೆ ಸರ್ಕಾರ ಮಾಡಿರುವ ಆದೇಶವನ್ನು ಖಂಡಿಸಿ ಕರ್ನಾಟಕ ರಾಜ್ಯ ಸರಕಾರಿ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರ ಸಂಘ ತಾಲ್ಲೂಕು ಘಟಕದಿಂದ ಬಿಇಓ ಕಚೇರಿ ಮುಂದೆ ಶಿಕ್ಷಕರು ಸೋಮವಾರ ಪ್ರತಿಭಟಿಸಿದರು.
ಕರ್ನಾಟಕ ರಾಜ್ಯ ಸರಕಾರಿ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರ ಸಂಘ ತಾಲ್ಲೂಕು ಅಧ್ಯಕ್ಷ ಪಿ.ಜೆ.ಗುರುರಾಜ ಮಾತನಾಡಿ, ಶಿಕ್ಷಕರುಗಳು ೧ ರಿಂದ ೭ ನೇ ತರಗತಿ ಬೋಧಿಸಲು ನೇಮಕವಾಗಿ ಅಂದಿನಿಂದಲೂ ಹಿರಿಯ ಪ್ರಾಥಮಿಕ ಹಂತದಲ್ಲಿ ಬೋಧಿಸುತ್ತಿದ್ದೆವೆ. ನಮ್ಮಲ್ಲಿ ಪದವಿ ಹಾಗೂ ಮುಂತಾದ ವಿದ್ಯಾರ್ಹತೆ ಸೇವಾ ಅನುಭವ ಇದ್ದರೂ ನಮ್ಮನ್ನು ಪರಿಗಣಿಸದೆ ದಿ.೧೯.೫.೧೦೧೭ರ ವೃಂದ ಬಲದ ಆದೇಶದಂತೆ ಪ್ರಾಥಮಿಕ ಶಾಲಾ ಶಿಕ್ಷಕರು ೧ ರಿಂದ ೫ ವೃಂದಕ್ಕೆ ಸೇರ್ಪಡೆ ಮಾಡಿ ಸೀಮಿತಗೊಳಿಸಿರುವುದು ನಮಗೆ ಅನ್ಯಾಯವಾಗಿರುತ್ತದೆ. ಆದ್ದರಿಂದ ನಮ್ಮನ್ನು ಪದವೀಧರರ ಪ್ರಾಥಮಿಕ ಶಾಲಾ ಶಿಕ್ಷಕರ ೬ ರಿಂದ ೮ ವೃಂದಕ್ಕೆ ಸೇರ್ಪಡೆ ಮಾಡಿ ನ್ಯಾಯ ದೊರೆಯುವವರೆಗೂ ನಾವುಗಳು ವೃಂದಬಲ ಪ್ರಾಥಮಿಕ ಶಾಲಾ ಶಿಕ್ಷಕರ ೧-೫ ಆದೇಶದಂತೆ ೧ ರಿಂದ ೫ ನೇ ತರಗತಿಗಳನ್ನು ಮಾತ್ರ ಬೋಧಿಸುತ್ತೆವೆ. ೬, ೭ ನೇ ತರಗತಿಗಳ ಬೋಧನಾ ಕಾರ್ಯ ಬಹಿಷ್ಕರಿಸಲು ನಿರ್ಧರಿಸಿದ್ದರಿಂದ ೬-೮ ತರಗತಿಗಳ ಸಂಬಂಧಿಸಿದ ತರಬೇತಿಗಳಿಗೆ ನಿಯೋಜಿಸಬಾರದು. ತರಬೇತಿಗಳನ್ನು ನಾವು ಬಹಿಷ್ಕರಿಸುತ್ತೆವೆ ಎಂದು ಮನವಿ ಮಾಡಿಕೊಳ್ಳುತ್ತಾ ನಮ್ಮ ನ್ಯಾಯಯುತ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಷಣ್ಮುಖಪ್ಪ ಮಾತನಾಡಿ, ಜುಲೈ ೯ ರಂದು ತುಮಕೂರು ಪ್ರಾಥಮಿಕ ಶಾಲಾ ಶಿಕ್ಷಕರ ಜಿಲ್ಲಾ ಸಂಘದ ವತಿಯಿಂದ ಬೃಹತ್ ಪ್ರತಿಭಟನೆ ರ‍್ಯಾಲಿ ಹಮ್ಮಿಕೊಳ್ಳಲಾಗಿದೆ. ಸಾವಿರಾರು ಶಿಕ್ಷಕರು ರ‍್ಯಾಲಿಯ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು. ಆದ್ದರಿಂದ ಜಿಲ್ಲೆಯ ಎಲ್ಲ ಶಿಕ್ಷಕರುಗಳು ಸಿ.ಎಲ್ ಹಾಕುವ ಮೂಲಕ ತುಮಕೂರು ಎಂ.ಜಿ.ರಸ್ತೆಯಲ್ಲಿರುವ ಬಾಲಭವನ ಹತ್ತಿರ ಶಿಕ್ಷಕರ ಸಂಘದ ಕಚೇರಿ ಬರಬೇಕಾಗಿ ಕೋರಿದ್ದಾರೆ.
ಈ ಸಂದರ್ಭದಲ್ಲಿ ಬಿಇಓ ರಂಗಧಾಮಯ್ಯರವರಿಗೆ ಮನವಿ ಸಲ್ಲಿಸಲಾಯಿತು. ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಪರಮೇಶ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜು, ಪದವೀಧರರ ಸಂಘದ ಉಪಾಧ್ಯಕ್ಷ ರತೀಶ್‌ಕುಮಾರ್, ಸದಸ್ಯರುಗಳಾದ ಎಸ್.ದೇವರಾಜು, ಕೃಷ್ಣಮೂರ್ತಿ, ಸುರೇಶ್, ಗೋಪಾಲ್, ಎಂ.ಎನ್.ರಾಜು, ಗಿರೀಶ್, ರೇಖಾಮಣಿ, ಮಂಜಮ್ಮ ಸೇರಿದಂತೆ ಇತರ ಶಿಕ್ಷಕರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ