ಒಂದೇ ಕಡೆ 20 ಕೊರೋನಾ ಪ್ರಕರಣ : 200ಕ್ಕೂ ಅಧಿಕ ಜನರಿಗೆ ಹೋಮ್​ ಕ್ವಾರಂಟೈನ್​

ವಿಜಯಪುರ :

      ವಿಜಯಪುರದಲ್ಲಿ ಕೊರೋನಾ ವೈರಸ್​ ತಡವಾಗಿ ಕಾಣಿಸಿಕೊಂಡರೂ ಬಹುಬೇಗ ಹರಡುತ್ತಿದೆ. ಇತ್ತೀಚೆಗೆ ಒಂದೇ ಏರಿಯಾದಲ್ಲಿ 20 ಕೊರೋನಾ ಪ್ರಕರಣಗಳು ಕಾಣಿಸಿಕೊಂಡಿದ್ದವು. ಹೀಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ 200ಕ್ಕೂ ಅಧಿಕ ಜನರನ್ನು ಬೇರೆಡೆ ಸ್ಥಳಾಂತರ ಮಾಡಲಾಗಿದೆ.

    ವಿಜಯಪುರದ ಒಂದೇ ಭಾಗದ 5 ಕುಟುಂಬಗಳಿಗೆ ಕೊರೋನಾ ಸೋಂಕು ಅಂಟಿದೆ. ಹೀಗಾಗಿ ಈ 5 ಕುಟುಂಬಗಳ ಸಂಬಂಧಿಕರು ಸೇರಿ 20ಕ್ಕೂ ಅಧಿಕ ಫ್ಯಾಮಿಲಿಗಳನ್ನು ಸ್ಥಳಾಂತರ ಮಾಡಲಾಗಿದೆ.

   ಸರ್ಕಾರಿ ಬಸ್​​ಗಳಲ್ಲಿ 20 ಜನರನ್ನು ಶಿಫ್ಟ್​ ಮಾಡುವ ಕಾರ್ಯ ನಡೆದಿದೆ.  ಕೊರೋನಾ ಪೀಡಿತರ ಪ್ರಥಮ ಹಾಗೂ ದ್ವಿತೀಯ ಸಂಪರ್ಕದಲ್ಲಿರುವವರನ್ನು ಗುರುತಿಸಿ ಕ್ವಾರಂಟೈನ್ ಮಾಡಲಾಗಿದೆ.  ಈ ಭಾಗದ ಸುತ್ತಮುತ್ತಲಿನ ಸುಮಾರು 1000 ಜನರ ಗಂಟಲು ದ್ರವ ಪರೀಕ್ಷೆ ಮಾಡಲು ವಿಜಯಪುರ ಜಿಲ್ಲಾಡಳಿತ ಮುಂದಾಗಿದೆ. ಈ ಮೂಲಕ ಕೊರೋನಾ ಸೋಂಕು ಹರಡದಂತೆ ನೋಡಿಕೊಳ್ಳುವ ನಿರ್ಧಾರಕ್ಕೆ ಬಂದಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap