ಮುಂಬೈ:
ಅನೇಕ ಯುವಕರು ಕೋಲ್ ಫೀಲ್ಡ್ ದಾನ್ಬಾದ್ ನಿಂದ ತಮ್ಮ ಪ್ರಯಾಣವನ್ನ ಪ್ರಾರಂಭಿಸಿದ್ದಾರೆ, ಇನ್ನೂ ತಮ್ಮದೇ ಆದ ಛಾಪು ಮೂಡಿಸಿ ಉತ್ತಮ ರೀತಿಯ ಜೀವನವನ್ನು ನಡೆಸುತ್ತಾ ಬಂದಿದ್ದಾರೆ. ಇಂತಹ ಸಾಲಿಗೆ ಸೇರಿದ ಮತ್ತೊಬ್ಬ ವ್ಯಕ್ತಿ ಅಂದರೆ ಕುನ್ನಾಲ್ ಮಿಥಲ್. ಬಾಲಿವುಡ್ಗೆ ಪಾದಾರ್ಪಣೆ ಮಾಡಿರುವ ಕುನ್ನಾಲ್ ಮಿಥಲ್ ಸದ್ಯದಲ್ಲೇ ನಂದು ಕಿ ಟೋಲಿ ಎಂಬ ವೆಬ್ ಸೇರಿಸ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಚಿಕ್ಕ ವಯಸ್ಸಿನಲ್ಲೇ ಮದುವೆ ಆಗುವುದರಿಂದ ಆಗುವ ತೊಂದರೆಗಳು, ಸಮಾಜದಲ್ಲಿ ಅದರ ಕೆಟ್ಟ ಪರಿಣಾಮಗಳ ಕುರಿತಾತ ವೆಬ್ ಸೆರೀಸ್ ಇದಾಗಿದೆ. ಇದೊಂದು ಕಾಮಿಡಿ ವೆಬ್ ಸಿರೀಸ್ ಆಗಿದ್ದು ಇದರ ಮುಖ್ಯಪಾತ್ರದಲ್ಲಿ ಕುನ್ನಾಲ್ ಮಿಥಲ್ ಕಾಣಿಸಿಕೊಂಡಿದ್ದಾರೆ. ಇಷ್ಟೇ ಅಲ್ಲದೆ ಗೇಮ್ ಥಿಯರಿ ಆಧಾರಿತ ಚಿತ್ರವೊಂದರಲ್ಲೂ ಆಫಿಸ್ ಅಸಿಸ್ಟೆಂಟ್ ಪಾತ್ರ ನಿರ್ವಹಿಸುತ್ತಿದ್ದಾರೆ.

ಕುನ್ನಾಲ್ ಮಿಥಲ್ ಎಂದರೆ ಯಾವುದೋ ಹೊಸ ಹೆಸರು ಎಂದೆನುಕೊಳ್ಳಬೇಡಿ, ಭಾರತದ ಹೆಸರಾಂತ ಕೈಗಾರಿಕೋದ್ಯಮಿ ಕೇದರ್ನಾಥ್ ಮಿಥಲ್ ರವರ ಪುತ್ರ ಕುನ್ನಾಲ್ ಮಿಥಲ್. ಚಿಕ್ಕ ವಯಸ್ಸಿನಿಂದಲೂ ಆಕ್ಟಿಂಗ್ ಮೇಳೆ ಆಸಕ್ತಿ ಇದ್ದ ಕುನ್ನಾಲ್, ಅಮಿತಾಬ್ ಬಚ್ಚನ್ ರವರ ಸಹಾಯದೊಂದಿಗೆ ರಂಗಪ್ರವೇಶ ಮಾಡಿದ್ದಾರೆ.
ಇನ್ನೂ ನಂದು ಕಿ ಟೋಲ್, ಒಂದು ಕಾಮಿಡಿ ವೆಬ್ ಸೀರಿಸ್ ಆಗಿದ್ದು ಸ್ನೇಹಿತರೆಲ್ಲರೂ ಚಿಕ್ಕ ವಯಸ್ಸಿನಲ್ಲೇ ಮದುವೆ ಆಗಿ, ಹಲವಾತು ಕಷ್ಟಗಳನ್ನು ಅನುಭವಿಸುತ್ತಾರೆ. ಸದ್ಯದಲ್ಲೇ ವೆಬ್ ಸೀರಿಸ್ ಬಿಡುಗಡೆಯಾಗಲಿದ್ದು ಅಭಿಮಾನಿಗಳು ಕಾತುರದಿಂದ ಕಾಯುತಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








