ಮುಂಬೈ ಮಹಾಮಳೆಗೆ ಸಿಲುಕಿದ ಮಹಾಲಕ್ಷ್ಮೀ ಎಕ್ಸ್‌ಪ್ರೆಸ್

ಮುಂಬೈ:

    ಮುಂಬೈ-ಕೊಲ್ಹಾಪುರ ಇಂದ ಚಲಿಸುವ ಮಹಾಲಕ್ಷ್ಮೀ ಎಕ್ಸ್‌ಪ್ರೆಸ್ ರೈಲು ಅತಿಯಾದ ಮಳೆಗೆ  ಸಿಲುಕಿ ಮಾರ್ಗಮಧ್ಯದಲ್ಲೇ ನಿಂತಿದೆ. 2 ಸಾವಿರ ಪ್ರಯಾಣಿಕರನ್ನು ಹೊತ್ತು ಹೊರಟಿದ್ದ ರೈಲು ರೈಲ್ವೆ ಹಳಿಯ ಮೇಲೆಲ್ಲಾ ನೀರು ತುಂಬಿರುವ ಕಾರಣ ಮುಂದೆ ಹೋಗಲಾಗದೆ ನಿಂತಿದೆ. ಪ್ರಯಾಣಿಕರನ್ನು ಸುರಕ್ಷಿತವಾಗಿ ಏರ್‌ಲಿಫ್ಟ್‌ ಮಾಡಲಾಗುತ್ತದೆ ಎಂದು ಕೇಂದ್ರ ರೈಲ್ವೆ ಇಲಾಖೆ ತಿಳಿಸಿದೆ. ಮುಂಬೈನಿಂದ 100 ಕಿ,ಮೀ ದೂರದಲ್ಲಿರುವ ಬದ್ಲಾಪುರದಲ್ಲಿ ರೈಲು ಮಳೆಯಲ್ಲಿ ಸಿಲುಕಿಕೊಂಡಿದೆ.

   ಎನ್‌ಡಿಆರ್ ಎಫ್ ತಂಡವು ರಕ್ಷಣಾ ಕಾರ್ಯದಲ್ಲಿ ತೊಡಗಿದೆ. ಮಳೆ ಸ್ವಲ್ಪ ಕಡಿಮೆಯಾದ ಬಳಿಕ ಪ್ರಯಾಣಿಕರನ್ನು ಏರ್‌ಲಿಫ್ಟ್‌ ಮಾಡುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಪ್ರಯಾಣಿಕರು ರೈಲಿನಿಂದ ಕೆಳಗಿಳಿಯದಂತೆ ಸೂಚಿಸಲಾಗಿದೆ. ರೈಲು ಸುರಕ್ಷಿತ ಸ್ಥಳವಾಗಿದೆ  ಎಂದು ತಿಳಿಸಿದ್ದಾರೆ.

  ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ