ಮಂಡ್ಯ ಚುನಾವಣಾಧಿಕಾರಿ 24 ಗಂಟೆಯಲ್ಲಿ ಜಾಗ ಖಾಲಿ ಮಾಡಬೇಕು : ಬಿ ಎಸ್ ವೈ

ಬೆಳಗಾವಿ :

   ಮಂಡ್ಯದಲ್ಲಿ ಸುಮಲತಾ ಪರ ಅಲೆ ಇದೆ. ಹೀಗಾಗಿ ಆಡಳಿತ ವ್ಯವಸ್ಥೆ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು  ಸಿಎಂ ಕುಮಾರಸ್ವಾಮಿ ವಿರುದ್ಧ ಯಡಿಯೂರಪ್ಪವಾಗ್ದಾಳಿ ನಡೆಸಿದ್ದಾರೆ.

ನಿಖಿಲ್ ಕುಮಾರಸ್ವಾಮಿ ನಾಮಪತ್ರ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು,’ ರದ್ದಾಗುತ್ತಿದ್ದ ನಾಮಪತ್ರವನ್ನು ಸರಿಪಡಿಸಿದ್ದಾರೆ. ಅಧಿಕಾರ ದುರುಪಯೋಗಪಡಿಸಿಕೊಳ್ಳುತ್ತಿರುವುದು ಅಪರಾಧ. ಮಂಡ್ಯ ಚುನಾವಣಾಧಿಕಾರಿ 24 ಗಂಟೆಯಲ್ಲಿ ಜಾಗ ಖಾಲಿ ಮಾಡಬೇಕು.  ಪ್ರಾಮಾಣಿಕ ಅಧಿಕಾರಿಯನ್ನ ನೇಮಿಸಿ, ತನಿಖೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಅಲ್ಲದೇ ‘ನಿಖಿಲ್ ಕುಮಾರ್ ನಾಮಪತ್ರ ರದ್ದು ಆಗಲಿದೆ. ಈಗ ಆಗದೇ ಇದ್ದರೆ ಮುಂದೆ ಕೋರ್ಟ್ ನಲ್ಲಿ ಆಗಲಿದೆ. ಸಿಎಂ ಮಗನ ಸೋಲಿನ ಭೀತಿಯಿಂದ ಹತಾಶರಾಗಿದ್ದಾರೆ ಎಂದು ಯಡಿಯೂರಪ್ಪ ಹೇಳಿದ್ದಾರೆ.

        ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ