ಈ ತಿಂಗಳ ಸಂಬಳ ಸಿಗದೆ ಜೆಟ್ ಏರ್ವೇಸ್ ಪೈಲಟ್ಗಳು ಏಪ್ರಿಲ್ 1ರೊಳಗೆ ಸಂಬಳ ಕೊಡದಿದ್ದರೆ ವಿಮಾನ ಚಾಲನೆ ಮಾಡುವುದಿಲ್ಲ ಎಂದು ಷರತ್ತು ವಡ್ಡಿದ್ದಾರೆ .
ಜೆಟ್ ಏರ್ವೇಸ್ನ ಷೇರುಗಳು ಮಂಗಳವಾರ ಶೇ.5ರಷ್ಟು ಕುಸಿದಿದ್ದು, ಕಂಪನಿಯಲ್ಲಿ ಶೇ. 24ರಷ್ಟು ಷೇರು ಹೊಂದಿರುವ ಸ್ಟೇಕ್ ಹೋಲ್ಡರ್ ಇತಿಹಾದ್ ಸಂಸ್ಥೆಯು ಬಂಡವಾಳ ಹೂಡಲು ಹಿಂದೇಟುಹಾಕುತ್ತಿದೆ. ಕಂಪನಿಯ ಸಂಸ್ಥಾಪಕ ನರೇಶ್ ಗೋಯಲ್ ಅವರು ಸದ್ಯ ಮೂರನೇ ಒಂದು ಭಾಗದಷ್ಟು ವಿಮಾನಗಳ ಮೇಲೆ ತಮ್ಮ ಅಸ್ತಿತ್ವ ಕಳೆದುಕೊಮಡಿದ್ದು 119 ವಿಮಾನಗಳ ಪೈಕಿ 41 ವಿಮಾನಗಳು ಜೆಟ್ ಏರ್ವೇಸ್ ಹಿಡಿತದಲ್ಲಿಲ್ಲ ಎಂದು ಹೇಳಲಾಗುತ್ತಿದೆ.