ಶ್ರೀನಗರ :
ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದಲ್ಲಿ ಭಾರತೀಯ ಸೇನಾಪಡೆ ಎನ್’ಕೌಂಟರ್ ನಡೆಸಿದ್ದು, ಇಬ್ಬರು ಉಗ್ರರು ಹಾಗೂ ಓರ್ವ ಸಹಚರನನ್ನು ಹತ್ಯೆ ಮಾಡಿದೆ. ಇಂದು ಮುಂಜಾನೆ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದಲ್ಲಿ ಎನ್ಕೌಂಟರ್ ನಡೆಸಿರುವ ಭಾರತೀಯ ಸೇನಾಪಡೆ ಇಬ್ಬರು ಉಗ್ರರು ಹಾಗೂ ಓರ್ವ ಸಹಚರನನ್ನು ಗುಂಡಿಕ್ಕಿ ಕೊಂದಿದ್ದಾರೆ.
ಪುಲ್ವಾಮಾ ಜಿಲ್ಲೆಯ ಅವಂತಿಪೋರಾದ ಗೋರಿಪೋರಾ ಎಂಬ ಪ್ರದೇಶದಲ್ಲಿ ಭಾರತೀಯ ಸೇನಾಪಡೆಯ ಯೋಧರು ಎನ್ಕೌಂಟರ್ ನಡೆಸಿದ್ದಾರೆ. ಅಡಗಿರುವ ಮತ್ತಷ್ಟು ಉಗ್ರರಿಗಾಗಿ ಇನ್ನೂ ಹುಡುಕಾಟ ನಡೆಸಲಾಗುತ್ತಿದೆ.
ಪುಲ್ವಾಮದ ಗೋರಿಪೋರಾದಲ್ಲಿ ಉಗ್ರರು ಅಡಗಿ ಕುಳಿತಿರುವ ಮಾಹಿತಿ ತಿಳಿಯುತ್ತಿದ್ದಂತೆ ಇಂದು ಮುಂಜಾನೆ ಸೈನಿಕರು ಕಾರ್ಯಾಚರಣೆ ಆರಂಭಿಸಿದ್ದರು. ಈ ಸಂದರ್ಭದಲ್ಲಿ ಉಗ್ರರು ಮತ್ತು ಭಾರತೀಯ ಸೇನಾಪಡೆಗಳ ನಡುವೆ ಗುಂಡಿನ ಚಕಮಕಿ ನಡೆದಿದೆ. ಇದರಿಂದಾಗಿ ಎನ್ಕೌಂಟರ್ ನಡೆಸಲು ನಿರ್ಧರಿಸಿದ ಸೇನಾಪಡೆಯ ಇಬ್ಬರು ಉಗ್ರರು ಸೇರಿದಂತೆ ಒಟ್ಟು ಮೂವರನ್ನು ಹತ್ಯೆ ಮಾಡಿದ್ದಾರೆ. ಹತ್ಯೆಯಾದವರಲ್ಲಿ ಉಗ್ರ ಸಂಘಟನೆಯ ಕಮಾಂಡರ್ ಕೂಡ ಸೇರಿದ್ದಾನೆ ಎನ್ನಲಾಗಿದೆ.
#UPDATE: 2 unidentified terrorists and 1 hardcore associate of terrorists killed. Search is still going on. Details shall follow: Jammu & Kashmir Police https://t.co/3j2aJFcfGQ
— ANI (@ANI) April 25, 2020
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ