ಹೌಸ್ಟನ್:
ಅಮೆರಿಕದಲ್ಲಿ ಅಪರೂಪದ ಪ್ರಕರಣವೊಂದು ವರದಿಯಾಗಿದೆ. ಅದೇನೆಂದರೆ, ಅಮೆರಿಕ ಮಹಿಳೆ 10 ನಿಮಿಷಗಳ ಅವಧಿಯಲ್ಲಿ ಆರು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಅಚ್ಚರಿ ಎಂದರೆ, ಅವರು ಜನ್ಮ ನೀಡಿದ್ದು ಮೂರು ಜೊತೆ ಅವಳಿ ಮಕ್ಕಳಿಗೆ.
ಹೌಸ್ಟನ್ನ ಮಹಿಳೆ ಥೆಲ್ಮಾ ಚೈಕಾಗೆ ಪ್ರಸವ ವೇದನೆ ಕಾಣಿಸಿಕೊಂಡಿತ್ತು. ಹಾಗಾಗಿ, ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಮಹಿಳೆಯ ಹೊಟ್ಟೆ ಸಾಮಾನ್ಯ ಗರ್ಭಿಣಿಯ ಹೊಟ್ಟೆಗಿಂತ ದೊಡ್ಡದಾಗಿತ್ತು. ಮಹಿಳೆ ಬೆಳಗ್ಗೆ 4:50-4:59ರ ಅವಧಿಯಲ್ಲಿ ಮೂರು ಜೊತೆ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ.
ಮೊದಲು ಹುಟ್ಟಿದ ಎರಡು ಜೊತೆ ಅವಳಿಗಳು ಗಂಡಾಗಿದ್ದು, ನಂತರ ಹುಟ್ಟಿದ ಅವಳಿ ಹೆಣ್ಣು. ತಾಯಿ ಹಾಗೂ ಆರು ಮಕ್ಕಳು ಆರೋಗ್ಯವಾಗಿವೆ ಎಂದು ವೈದ್ಯರು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
