ನವದೆಹಲಿ :
ವೈರಿ ರಾಷ್ಟ್ರಗಳ ಯುದ್ಧ ವಿಮಾನವನ್ನು ಹೊಡೆದುರುಳಿಸುವುದು ಸಾಮಾನ್ಯ. ಆದರೆ, ಪಾಕಿಸ್ತಾನ ತನ್ನದೇ ಪ್ರದೇಶದಲ್ಲಿ, ತನ್ನದೇ ವಿಮಾನವನ್ನು ಹೊಡೆದುರುಳಿಸಿದೆ. ಈ ತಪ್ಪು ನಡೆಯಲು ಚೀನಾದ ಆ್ಯಂಟಿ-ಏರ್ ಮಿಸೈಲ್ ಸಿಸ್ಟಮ್ ಕಾರಣವಂತೆ!
ಪುಲ್ವಾಮಾ ದಾಳಿ ನಂತರದಲ್ಲಿ ಪಾಕಿಸ್ತಾನದ ಬಾಲಕೋಟ್ ಪ್ರದೇಶದಲ್ಲಿ ಭಾರತೀಯ ಸೇನೆ ಸರ್ಜಿಕಲ್ ಸ್ಟ್ರೈಕ್ ನಡೆಸಿತ್ತು. ಇದರಿಂದ ಉದ್ರಿಕ್ತ ವಾತಾವರಣ ಸೃಷ್ಟಿಯಾಗಿತ್ತು. ಈ ಘಟನೆ ನಂತರದಲ್ಲಿ ಪಾಕ್ ಎಚ್ಚೆತ್ತುಕೊಂಡಿದೆ. ಗಡಿ ಪ್ರದೇಶದಲ್ಲಿ ಹದ್ದಿನ ಕಟ್ಟಿಣ್ಣಿದೆ. ಆದರೆ, ದೊಡ್ಡ ತಪ್ಪೊಂದನ್ನು ಮಾಡಿಕೋಂಡಿರುವ ಪಾಕ್, ಭಾರತದ ವಿಮಾನ ಎಂದು ತಿಳಿದು ತನ್ನದೇ ವಿಮಾನವನ್ನು ಹೊಡೆದುರುಳಿಸಿದೆ!
ಈ ವಿಚಾರವನ್ನು ಭಾರತದ ಮಾಜಿ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಟ್ವಿಟ್ಟರ್ನಲ್ಲಿ ಖಚಿತಪಡಿಸಿದ್ದಾರೆ. “ಪಾಕಿಸ್ತಾನವು ಭಾರತದ ವಿಮಾನವೆಂದು ತಿಳಿದು ತನ್ನದೇ ಎರಡು ಜೆಎಫ್-17 ವಿಮಾನಗಳನ್ನು ಹೊಡೆದುರುಳಿಸಿದೆ,” ಎಂದು ಬರೆದುಕೊಂಡಿದ್ದಾರೆ.
Something major amiss in Multan/Pakistan. Complete Blackout, blasts heard, initial reports indicate Pak Airforce shot down two own JF17 in panic mistaking as IAF. Outcome of Balakot strikes & still some say we did no harm. Balakot game changer, creating descion dilemma 4 Pak.
— Lt Gen Vinod Bhatia (@Ptr6Vb) March 26, 2019