ಹೊಸದಿಲ್ಲಿ :
ಪರಿಸರಕ್ಕೆ ಕಡಿಮೆ ಹಾನಿ ಉಂಟುಮಾಡುವ, ಪರಿಸರ ಸ್ನೇಹಿ ಪಟಾಕಿಗಳನ್ನು ಮಾತ್ರವೇ ಮಾರುಕಟ್ಟೆಯಲ್ಲಿ ಮಾರುವುದಕ್ಕೆ ಅವಕಾಶ ಇರುತ್ತದೆ ಎಂದು ಸುಪ್ರೀಂ ಕೋರ್ಟ್ ಇಂದು ತನ್ನ ಆದೇಶದಲ್ಲಿ ಸ್ಪಷ್ಟಪಡಿಸಿದೆ.
ಪಟಾಕಿ ಸಿಡಿಸುವುದರಿಂದ ವಾಯು ಮಾಲಿನ್ಯ ಹೆಚ್ಚುತ್ತದೆ ಹಾಗಾಗಿ ದೇಶದಾದ್ಯಂತ ಪಟಾಕಿಗೆ ನಿಷೇಧ ಹೇರಬೇಕು ಎಂಬ ಮನವಿಯನ್ನು ತಳ್ಳಿಹಾಕಿರುವ ಸುಪ್ರೀಂಕೋರ್ಟ್, ಪಟಾಕಿ ಮಾರಾಟಕ್ಕೆ ನಿಷೇಧ ಹೇರಲು ಸಾಧ್ಯವಿಲ್ಲ ಆದರೆ ಕಡಿಮೆ ಮಾಲಿನ್ಯವುಂಟು ಮಾಡುವ ಪಟಾಕಿಗಳನ್ನು ಮಾತ್ರ ಮಾರಾಟ ಮಾಡಬಹುದು ಎಂದು ತಿಳಿಸಿದೆ.
ಪಟಾಕಿಗಳನ್ನು ಆನ್ ಲೈನ್‌ನಲ್ಲಿ ಮಾರಾಟ ಮಾಡುವುದನ್ನು ಸುಪ್ರೀಂ ಕೋರ್ಟ್ ನಿಷೇಧಿಸಿದೆ. ಕೇವಲ ಪರವಾನಿಗೆ ಪಡೆದ ವ್ಯಾಪಾರಸ್ಥರಿಗೆ ಮಾತ್ರವೇ ಪಟಾಕಿ ಮಾರಾಟ ಮಾಡುವುದಕ್ಕೆ ಅವಕಾಶ ಇರುತ್ತದೆ ಎಂದು ನ್ಯಾಯಾಧೀಶ ಅರ್ಜನ್ ಕುಮಾರ್ ಹೇಳಿದರು.
ದೀಪಾವಳಿ ಹಬ್ಬದ ವೇಳೆ ರಾತ್ರಿ 8 ಗಂಟೆಯಿಂದ 10 ಗಂಟೆ ವರೆಗೆ ಪಟಾಕಿ ಸಿಡಿಸಬಹುದು. ಅದೇ ವೇಳೆ ಹೊಸವರ್ಷ ಮತ್ತು ಕ್ರಿಸ್ಮಸ್ ಹಬ್ಬದ ವೇಳೆ ರಾತ್ರಿ 11.45 ಮತ್ತು 12.30ರ ವರೆಗೆ ಪಟಾಕಿ ಸಿಡಿಸಬಹುದಾಗಿದೆ. ಪರವಾನಗಿ ಹೊಂದಿರುವ ಮಾರಾಟಗಾರರಿಗೆ ಮಾತ್ರ ಪಟಾಕಿ ಮಾರುವ ಅವಕಾಶವಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ