ಒಸಮಾ ಬಿನ್ ಲಾಡೆನ್ ಪುತ್ರ ಹಮ್ಜಾ ಫಿನಿಶ್!!!

ವಾಷಿಂಗ್ಟನ್:

      ಅಲ್ ಖೈದಾ ಉಗ್ರ ಸಂಘಟನೆಯ  ಭಯೋತ್ಪಾದಕ ಒಸಾಮಾ ಬಿನ್ ಲಾಡೆನ್ ಮಗ ಹಮ್ಜಾ ಲಾಡೆನ್ ಮೃತಪಟ್ಟಿರುವ ಸುದ್ದಿ ಬಂದಿದೆ.

      ಎನ್ ಬಿಸಿ ವರದಿ ಪ್ರಕಾರ, ಅಮೆರಿಕದ ಮೂವರು ಅಧಿಕಾರಿಗಳು ಲಾಡೆನ್ ಪುತ್ರ ಹಂಝಾ ಸಾವನ್ನಪ್ಪಿರುವುದನ್ನು ಖಚಿತಪಡಿಸಿರುವುದಾಗಿ ಹೇಳಿದ್ದು, ಆದರೆ ಯಾವ ಸ್ಥಳ ಮತ್ತು ಯಾವಾಗ ಎಂಬ ವಿವರ ನೀಡಲು ನಿರಾಕರಿಸಿರುವುದಾಗಿ ತಿಳಿಸಿದೆ.

      ಒಸಾಮಾ ಬಿನ್ ಲಾಡೆನ್​ನ 20 ಮಕ್ಕಳಲ್ಲಿ ಈ ಹಮ್ಜಾ ಎಂಬ ಉಗ್ರ 15ನೆಯವನು. ಬಿನ್ ಲಾಡೆನ್​ನ 3ನೇ ಹೆಂಡತಿಯ ಮಗ ಎನ್ನಲಾಗುತ್ತಿರುವ ಹಮ್ಜಾಗೆ 30 ವರ್ಷವಾಗಿತ್ತು. ಅಲ್​ಖೈದಾ ಸಂಘಟನೆಯ ನಾಯಕತ್ವ ವಹಿಸಿಕೊಳ್ಳುವ ಸಿದ್ಧತೆಯಲ್ಲಿದ್ದ ಹಮ್ಜಾ ಸಾಕಷ್ಟು ಕಡೆ ಭಯೋತ್ಪಾದಕ ದಾಳಿ ನಡೆಸಲು ಸಜ್ಜಾಗಿದ್ದ ಎನ್ನಲಾಗಿದೆ.

Image result for osama bin laden son

      ತನ್ನ ತಂದೆ ಒಸಾಮಾ ಬಿನ್ ಲಾಡೆನ್​ ಸಾವಿಗೆ ಸೇಡು ತೀರಿಸಿಕೊಳ್ಳಲು ಅಮೆರಿಕ ಸೇನೆಯ ಮೇಲೆ ದಾಳಿ ನಡೆಸುವುದಾಗಿಯೂ ಹಮ್ಜಾ ಆಡಿಯೋ ಮತ್ತು ವಿಡಿಯೋ ರೆಕಾರ್ಡ್​ ಬಿಡುಗಡೆ ಮಾಡಿದ್ದ. ಈ ಕಾರಣದಿಂದಲೇ ಅಮೆರಿಕ ಸರ್ಕಾರ ಆತನನ್ನು ಹಿಡಿದುಕೊಟ್ಟವರಿಗೆ 7 ಕೋಟಿ ರೂ. ಬಹುಮಾನ ನೀಡುವುದಾಗಿ ಘೋಷಿಸಿತ್ತು.

      ಸಾವಿನ ಕುರಿತು ಎನ್ ಬಿಸಿ ವರದಿಯನ್ನು ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಖಚಿತಪಡಿಸಲೂ ಇಲ್ಲ, ನಿರಾಕರಿಸಲೂ ಇಲ್ಲ. ಬದಲಾಗಿ “ನಾನು ಇದರ ಬಗ್ಗೆ ಪ್ರತಿಕ್ರಿಯಿಸಲು ಬಯಸುವುದಿಲ್ಲ” ಎಂದು ಹೇಳಿದ್ದಾರೆ.

      ಅಫ್ಘಾನಿಸ್ತಾನ, ಇರಾನ್, ಪಾಕಿಸ್ತಾನ ಅಥವಾ ಸಿರಿಯಾಗಳಲ್ಲಿ ಜ್ಯೂನಿಯರ್ ಲಾಡೆನ್ ಅಡುಗುತಾಣಗಳಿತ್ತು. ಈ ದೇಶಗಳಲ್ಲಿ ಯಾವುದೋ ಒಂದು ದೇಶದಲ್ಲಿ ಮೃತಪಟ್ಟಿದ್ದಾನೆ ಎಂದು ಸದ್ಯಕ್ಕೆ ಲಭ್ಯ ಮಾಹಿತಿ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap