‘ಪುಲ್ವಾಮ ದಾಳಿಗೆ ಜೈಷ್ ಕಾರಣವಲ್ಲ’- ಉಗ್ರರ ಸಮರ್ಥಿಸಿಕೊಂಡ ಪಾಕ್!!

ನವದೆಹಲಿ:

      ‘ಪುಲ್ವಾಮ ದಾಳಿಗೆ ಭಯೋತ್ಪಾದಕ ಸಂಘಟನೆ ಹೊಣೆಯಲ್ಲ’ ಎಂದು ಪಾಕಿಸ್ತಾನ ವಿದೇಶಾಂಗ ಸಚಿವ ಶಾಹ್ ಮಹಮ್ಮದ್ ಖುರೇಷಿ  ಜೈಶ್-ಎ- ಮೊಹಮದ್ ಅನ್ನು ಸಮರ್ಥಿಸಿಕೊಂಡಿದ್ದಾರೆ.  

      ಬಿಬಿಸಿಯ ಸಂದರ್ಶನವೊಂದರಲ್ಲಿ ಮಾತನಾಡಿದ ಪಾಕಿಸ್ತಾನ ವಿದೇಶಾಂಗ ಸಚಿವ ಶಾಹ್ ಮಹಮ್ಮದ್ ಖುರೇಷಿ, ಪುಲ್ವಾಮಾ ದಾಳಿಯ ಜವಾಬ್ದಾರಿಯನ್ನು ಜೈಷ್ ಸಂಘಟನೆ ಹೊತ್ತಿಲ್ಲ. ಪುಲ್ವಾಮಾ ದಾಳಿ ಸಂಬಂಧಿಸಿದಂತೆ ಜೈಷೆ ಉಗ್ರ ಸಂಘಟನೆಯನ್ನು ವಿಚಾರಣೆಗೆ ಒಳಪಡಿಸಿದ್ದೇವೆ. ಆದರೆ ಅವರು ಈ ದಾಳಿಯನ್ನ ಎಸೆಗಿಲ್ಲ ಎಂದು ಹೇಳಿದ್ದಾರೆ.  ನಮಗೂ ಈ ವಿಷಯದ ಬಗ್ಗೆ ಗೊಂದಲಗಳಿವೆ ಎಂದು ಪಾಕಿಸ್ತಾನ ವಿದೇಶಾಂಗ ಸಚಿವರು ಸ್ಪಷ್ಟವಾಗಿ ಹೇಳಿದ್ದಾರೆ.

      ಪಾಕಿಸ್ತಾನ ಏನು ಹೇಳುತ್ತಿದೆ ಎಂಬುದನ್ನು ಭಾರತ ಕೇಳಿದ್ದಿದ್ದರೆ ಉಭಯ ದೇಶಗಳ ನಡುವೆ ಈ ಉದ್ವಿಗ್ನತೆ ತಲೆದೋರುತ್ತಿರಲಿಲ್ಲ. ಜೈಶ್​ ಎ ಮೊಹಮ್ಮದ್​ ಸಂಘಟನೆ ಹಿಂಸಾಚಾರದಲ್ಲಿ ತೊಡಗಿರುವ ಬಗ್ಗೆ ಭಾರತ ಸೂಕ್ತ ಸಾಕ್ಷ್ಯಾಧಾರ ಒದಗಿಸಿದರೆ ಆತನನ್ನು ಬಂಧಿಸಲು ಪಾಕಿಸ್ತಾನ ಸಿದ್ಧವಿದೆ ಎಂದು ಹೇಳಿದರು.

    ಫೆಬ್ರವರಿ 14ರಂದು 40 ಯೋಧರ ಸಾವಿಗೆ ಕಾರಣವಾದ ಆತ್ಮಾಹುತಿ ದಾಳಿಯ ಜವಾಬ್ದಾರಿಯನ್ನು ಸ್ವತಃ ಜೈಷ್ ಸಂಘಟನೆ ಒಪ್ಪಿಕೊಂಡಿತ್ತು. ಅಲ್ಲದೇ ನಿನ್ನೆಯಷ್ಟೇ ಜೈಷೆ ಮೊಹಮ್ಮದ್​ ಫೌಂಡರ್​ ಮಸೂದ್​ ಅಜರ್​ ನಮ್ಮ ದೇಶದಲ್ಲೇ ಇದ್ದಾನೆ ಎಂದು ಹೇಳಿದ್ದ ಪಾಕ್, ಮರುದಿನವೇ ಮತ್ತೊಂದು ಹಸಿ ಸುಳ್ಳನ್ನ ಹೇಳಿದೆ. 

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap