ಪಾಕಿಗಳಿಂದ ಮತ್ತೆ ಗುಂಡಿನ ದಾಳಿ : ತಕ್ಕ ಪ್ರತ್ಯುತ್ತರ ನೀಡಿದ ಸೇನೆ!

ಪೂಂಚ್ :

      ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಬಳಿ ಅಪ್ರಚೋದಿತ ಗುಂಡಿನ ದಾಳಿ ಹಾಗೂ ಶೆಲ್‌ ದಾಳಿ ನಡೆಸಿರುವ ಪಾಕಿಸ್ತಾನ ಮತ್ತೊಮ್ಮೆ ಕದನ ವಿರಾಮ ಉಲ್ಲಂಘಿಸಿದ್ದು, ಭಾರತೀಯ ಯೋಧರು ಪ್ರತಿದಾಳಿ ನಡೆಸಿದ ಪರಿಣಾಮ ಪಾಕ್​ ತನ್ನ ದಾಳಿ ನಿಲ್ಲಿಸಿತು ಎನ್ನಲಾಗಿದೆ. 

      ಇಂದು(ಗುರುವಾರ) ಬೆಳಗ್ಗೆ ಜಮ್ಮು ಮತ್ತು ಕಾಶ್ಮೀರದ ಪೂಂಚ್​ ಜಿಲ್ಲೆಯ ಕೃಷ್ಣ ಘಾಟಿ ವಲಯದಲ್ಲಿ ಪಾಕ್​  ಸತತ ಒಂದು ಗಂಟೆಗಳ ಗುಂಡಿನ ಹಾಗೂ ಭಾರಿ ಪ್ರಮಾಣದ ಶೆಲ್​ಗಳ ದಾಳಿ ನಡೆಸಿತು.  ಬೆಳ್ಳಗ್ಗೆ 6 ಗಂಟೆಗೆ ಆರಂಭವಾದ ದಾಳಿ 7 ಗಂಟೆವರೆಗೆ ಮುಂದುವರೆಯಿತು ಎಂದು ರಕ್ಷಣಾ ವಕ್ತಾರ ಲೆಫ್ಟಿನೆಂಟ್​ ಕರ್ನಲ್​ ದೇವೇಂದರ್​ ಆನಂದ್​ ಹೇಳಿದ್ದಾರೆ.

      ರಾಜೌರಿ ಜಿಲ್ಲೆಯ ಕೃಷ್ಣ ಘಾಟಿ ಹಾಗೂ ಮೆಂಢರ್‌ ಪ್ರದೇಶಗಳ ಬಳಿ ಪಾಕಿಸ್ತಾನ ಪಡೆಗಳು ಬುಧವಾರವೂ ಗುಂಡಿನ ದಾಳಿ ನಡೆಸಿದ್ದವು. ಬಾರಾಮುಲ್ಲಾ ಜಿಲ್ಲೆಯ ಉರಿ ಪ್ರದೇಶದಲ್ಲಿರುವ ಕಮಲಾಕೋಟ್‌ ಎಂಬಲ್ಲಿಯೂ ಮತ್ತೊಂದು ದಾಳಿ ಪ್ರಕರಣ ವರದಿಯಾಗಿತ್ತು. ಈ ಎಲ್ಲ ದಾಳಿಗಳನ್ನು ಭಾರತ ಪಡೆಗಳು ಸಮರ್ಥವಾಗಿ ಹಿಮ್ಮೆಟ್ಟಿಸಿದ್ದವು.

      ಇನ್ನು ಗಡಿಯಲ್ಲಿ ಯುದ್ಧ ಆತಂಕ ಎದುರಾಗಿರುವುದರಿಂದ ಇಂದು ಸಹ 5 ಕೀ.ಮೀ ವ್ಯಾಪ್ತಿಯಲ್ಲಿ ಶಾಲೆಗಳು ಬಂದ್​ ಆಗಿವೆ. ರಾಜೌರಿ, ಪೂಂಚ್ ಹಾಗೂ ಸಾಂಬಾ ಜಿಲ್ಲೆಗಳು ಸಂಪೂರ್ಣ ಸ್ಥಬ್ಧವಾಗಿವೆ.
 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap