ಇಸ್ಲಾಮಾಬಾದ್:
ಲಾಹೋರ್ನಿಂದ ಕರಾಚಿಗೆ ಹೊರಟಿದ್ದ 90 ಕ್ಕೂ ಹೆಚ್ಚು ಜನರಿದ್ದ ಪಿಐಎ( ಪಾಕಿಸ್ತಾನ ಇಂಟರ್ನ್ಯಾಷನಲ್ ಏರ್ಲೈನ್ಸ್) ವಿಮಾನವೊಂದು ಅಪಘಾತಕ್ಕೀಡಾಗಿದೆ.
ಏರ್ಬಸ್ ನಿರ್ಮಿತ ಎ320 ಮಾದರಿಯ ವಿಮಾನ ಇದಾಗಿದ್ದು, ಲಾಹೋರ್ನಿಂದ ಟೇಕಾಫ್ ಆದ ವಿಮಾನ ಕರಾಚಿಯನ್ನು ತಲುಪಬೇಕಿತ್ತು. ಇನ್ನೇನು ಕರಾಚಿಗೆ ಕೊಂಚ ದೂರ ಇರುವಾಗಲೇ ವಿಮಾನ ನಿಲ್ದಾಣದ ಸಮೀಪವಿರುವ ವಸತಿ ವಸಾಹತು ಮೇಲೆ ಪಿಐಎ ವಿಮಾನ ಅಪಘಾತಕ್ಕೀಡಾಗಿದೆ.
Horrifying, tragic. An @Official_PIA Airbus A320 has crashed in a residential area in Karachi. There were 107 on board. Had taken off from Lahore, crashed during approach to Jinnah Int’l Airport, Karachi. pic.twitter.com/n7dR9lI99N
— Shiv Aroor (@ShivAroor) May 22, 2020
ಪಿಐಎ ವಕ್ತಾರ ಅಬ್ದುಲ್ ಸತ್ತಾರ್ ಅಪಘಾತವನ್ನು ಖಚಿತಪಡಿಸಿದ್ದು, “ಇದೀಗ ಏನನ್ನೂ ಹೇಳುವುದು ಅಕಾಲಿಕವಾಗಿರುತ್ತದೆ. ತುರ್ತು ಲ್ಯಾಂಡಿಂಗ್‌ಗಳನ್ನು ನಿರ್ವಹಿಸಲು ನಮ್ಮ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ನನ್ನ ಎಲ್ಲಾ ಪ್ರಾರ್ಥನೆಗಳು ಕುಟುಂಬಗಳೊಂದಿಗೆ ಇವೆ. ನಾವು ಮಾಹಿತಿಯನ್ನು ಪಾರದರ್ಶಕ ರೀತಿಯಲ್ಲಿ ಒದಗಿಸುವುದನ್ನು ಮುಂದುವರಿಸುತ್ತೇವೆ” ಎಂದು ತಿಳಿಸಿದ್ದಾರೆ.
ವಿಮಾನ ಪತನಕ್ಕೆ ಇನ್ನೂ ನಿಖರ ಮಾಹಿತಿ ತಿಳಿದು ಬಂದಿಲ್ಲ. ಸಾವು-ನೋವಿನ ಬಗ್ಗೆಯೂ ತಿಳಿದು ಬಂದಿಲ್ಲ.
ವಿಮಾನದಲ್ಲಿದ್ದರು 90 ಮಂದಿ ಪ್ರಯಾಣಿಕರು :
ಪಾಕಿಸ್ತಾನ ಮಾಧ್ಯಮಗಳ ವರದಿ ಪ್ರಕಾರ, ಪತನಗೊಂಡ ವಿಮಾನದಲ್ಲಿ ಒಟ್ಟು 90 ಮಂದಿ ಪ್ರಯಾಣಿಕರು ಇದ್ದರೆಂದು ತಿಳಿದು ಬಂದಿದೆ. ಸಾವು ನೋವುಗಳ ಬಗ್ಗೆ ಇನ್ನೂ ಸ್ಪಷ್ಟನೆ ದೊರಕಿಲ್ಲ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
