ಉತ್ತರಪ್ರದೇಶ:
ರೈಲ್ವೆ ನಿಲ್ದಾಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರವನ್ನು ಮುದ್ರಿಸಿರುವ ರೈಲ್ವೆ ಟಿಕೆಟ್‌ಗಳನ್ನು ಪ್ರಯಾಣಿಕರಿಗೆ ವಿತರಿಸಿದ್ದಕ್ಕೆ ಉತ್ತರ ಪ್ರದೇಶದ ಬಾರಾಬಂಕಿಯ ಇಬ್ಬರು ರೈಲ್ವೆ ಉದ್ಯೋಗಿಗಳನ್ನು ಸೋಮವಾರ ಅಮಾನತು ಮಾಡಲಾಗಿದೆ.
ಏಪ್ರಿಲ್ 13ರಂದು ಟಿಕೆಟ್ ವಿತರಿಸುವ ಉದ್ಯೋಗಿಗಳ ಪಾಳಿ ಬದಲಾಗಿತ್ತು. ಈ ಸಂದರ್ಭದಲ್ಲಿ ಹಳೆಯ ಟಿಕೆಟ್ ರೋಲ್ ಅನ್ನು ಕಣ್ತಪ್ಪಿನಿಂದ ಬಳಸಿಕೊಳ್ಳಲಾಗಿತ್ತು. ಈ ತಪ್ಪಿಗಾಗಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪದಡಿ ಸಂತೋಷ ಕುಮಾರ್ ಮತ್ತು ಚಿತ್ರಾ ಕುಮಾರಿಯನ್ನು ಅಮಾನತುಗೊಳಿಸಲಾಗಿದೆ.
‘ಇದು ಉದ್ದೇಶಪೂರ್ವಕವಾಗಿ ಆಗಿದ್ದಲ್ಲ. ಪ್ರಧಾನಿ ಮೋದಿಯವರ ಚಿತ್ರವಿರುವ ಕಾಗದವನ್ನು ಕಣ್ತಪ್ಪಿನಿಂದ ಬಳಸಲಾಗಿದೆ’ ಎಂದು ರೈಲ್ವೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಉತ್ತರಪ್ರದೇಶದಲ್ಲಿ ಮಾರ್ಚ್ 10ರಂದು ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದಿತ್ತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
