ಶ್ರಮ, ಬಲವನ್ನು ಶತ್ರುತ್ವ ಬೆಳೆಸುವುದರ ಬದಲು ಮನುಕುಲದ ಸಬಲೀಕರಣಕ್ಕೆ ಬಳಸೋಣ

ನವದೆಹಲಿ : 

     ‘ನಮ್ಮ ಶ್ರಮ ಮತ್ತು ಬಲವನ್ನು ಶತ್ರುತ್ವ ಬೆಳೆಸುವುದರ ಬದಲು ಮನುಕುಲದ ಸಬಲೀಕರಣಕ್ಕೆ ಬಳಸೋಣ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

     ಅವರು ಇಂಡೋ-ಜಪಾನ್ ಆರನೇ ಸಂವಾದ ಕಾರ್ಯಕ್ರಮದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡುತ್ತ, ಹಿಂದೆಲ್ಲ, ಮಾನವೀಯತೆಯು ಪಾಲುದಾರಿಕೆಯ ಬದಲು ಮುಖಾಮುಖಿಯ ಹಾದಿ ಹಿಡಿಯಿತು. ಸಾಮ್ರಾಜ್ಯಶಾಹಿಯಿಂದ ಹಿಡಿದು ವಿಶ್ವ ಮಹಾಯುದ್ಧಗಳ ತನಕ, ಶಸ್ತ್ರಾಸ್ತ್ರ ಸಮರದಿಂದ ಹಿಡಿದು ಬಾಹ್ಯಾಕಾಶ ಸಮರದ ತನಕ, ನಾವು ಮಾತುಕತೆ ನಡೆಸಿದ್ದೇವೆ ಆದರೆ ಅವೆಲ್ಲವೂ ಇತರರ ಕಾಲೆಳೆಯುವ ನಿಟ್ಟಿನಲ್ಲೇ ಇದ್ದವು. ಈಗ ನಾವೆಲ್ಲರೂ ಜತೆಯಾಗಿ ಅಭಿವೃದ್ಧಿ ಹೊಂದೋಣ. ನಮ್ಮೆಲ್ಲರ ಅಸ್ತಿತ್ವದ ಆಧಾರ ಸ್ತಂಭವಾಗಿ ಪರಿಸರ ಇರುವಂತೆ ನೋಡಿಕೊಳ್ಳಬೇಕು. ಪರಸ್ಪರ ಸಾಮರಸ್ಯದೊಂದಿಗೆ ಸಹಬಾಳ್ವೆ ನಡೆಸುವ ಪರಿಕಲ್ಪನೆಯು ಎಲ್ಲ ಅಭಿವೃದ್ಧಿ ಕಾರ್ಯಗಳ ಮುಖ್ಯ ಕೇಂದ್ರಬಿಂದುವಾಗಿರುವಂತೆ ನೋಡಿಕೊಳ್ಳೋಣ. ನಮ್ಮ ಶ್ರಮ, ಬಲವನ್ನು ಶತ್ರುತ್ವ ಬೆಳೆಸುವುದರ ಬದಲು ಮನುಕುಲದ ಸಬಲೀಕರಣಕ್ಕೆ ಬಳಸೋಣ ಎಂದು ತಿಳಿಸಿದ್ದಾರೆ.

    “ಐತಿಹಾಸಿಕವಾಗಿ ಬುದ್ಧನ ಸಂದೇಶದ ಬೆಳಕು ಭಾರತದಿಂದ ವಿಶ್ವದ ಅನೇಕ ಭಾಗಗಳಿಗೆ ಹರಡಿತು. ಇಂದು, ಸಾಂಪ್ರದಾಯಿಕ ಬೌದ್ಧ ಸಾಹಿತ್ಯ ಮತ್ತು ಧರ್ಮಗ್ರಂಥಗಳ ಗ್ರಂಥಾಲಯವನ್ನು ನಿರ್ಮಿಸುವ ವಿಚಾರವನ್ನು ನಾನು ಪ್ರಸ್ತಾಪಿಸಲು ಬಯಸುತ್ತೇನೆ. ಗ್ರಂಥಾಲಯಕ್ಕೆ ಬೇಕಾದ ಬೌದ್ಧ ಸಾಹಿತ್ಯದ ಡಿಜಿಟಲ್ ಪ್ರತಿಗಳನ್ನು ವಿವಿಧ ದೇಶಗಳಿಂದ ಸಂಗ್ರಹಿಸಲಾಗುತ್ತದೆ. ಇವುಗಳನ್ನು ಭಾಷಾಂತರಿಸಿ ಬೌದ್ಧ ಧರ್ಮದ ಎಲ್ಲಾ ಸನ್ಯಾಸಿಗಳು ಮತ್ತು ವಿದ್ವಾಂಸರಿಗೆ ಉಚಿತವಾಗಿ ಲಭ್ಯವಾಗುವಂತೆ ಮಾಡಲಾಗುವುದು. ಭಾರತದಲ್ಲಿ ಇದರ ಆತಿಥ್ಯ ವಹಿಸಲು ಹಾಗೂ ಇದಕ್ಕೆ ಬೇಕಾದ ಸಂಪನ್ಮೂಲಗಳನ್ನು ಒದಗಿಸಲು ನಾವು ಸಂತೋಷ ಪಡುತ್ತೇವೆ” ಎಂದು ಪ್ರಧಾನಿ ತಿಳಿಸಿದರು.

     ಭಾರತ ಮತ್ತು ವಿಯೆಟ್ನಾಂ ದೇಶಗಳು ತಮ್ಮ ಸಂಬಂಧವನ್ನು 2016 ರಲ್ಲಿ ಸಮಗ್ರ ಕಾರ್ಯತಂತ್ರದ ಸಹಭಾಗಿತ್ವದ ಮಟ್ಟಕ್ಕೆ ಕರೆದೊಯ್ದಿತ್ತು. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap